’ಪುರಾಣ’ ಕೃತಿಯನ್ನು ವಿಮರ್ಶಕರಾದ ಡಾ.ಕೆ.ಎಲ್ ಗೋಪಾಲಕೃಷ್ಣಯ್ಯನವರು ರಚಿಸಿದ್ದಾರೆ. ’ಸಾಹಿತ್ಯ ಪಾರಿಭಾಷಿಕ ಮಾಲೆ’ಯ ಸರಣಿಯಲ್ಲಿ ಹೊರತಂದಿದ್ದು, ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಪ್ರಕಟ ಮಾಡಲಾಗಿದೆ.
ಸಾಂಪ್ರದಾಯಕವಾದ ಪುರಾತನ ಕಥೆಗಳು ಎಂಬ ಅರ್ಥದಲ್ಲಿ ’ಪುರಾಣ’ ಶಬ್ದವನ್ನು ಬಳಸಲಾಗುತ್ತದೆ., ಬಹಳ ಹಳೆಯದು, ಕಟ್ಟುಕತೆ, ಸುಳ್ಳಿನ ಕಂತೆ, ಬೇಸರತರಿಸುವಂತದ್ದು, ಎಂಬ ರೀತಿಯಲ್ಲೂ ಪುರಾಣ ಶಬ್ದ ಬಳಕೆಯಲ್ಲಿದೆ. ಪ್ರಾಚೀನವಾದ ನಂಬಿಕೆಗಳು, ಆದಿಮ ಜನರ ನಡವಳಿಕೆಗಳು, ಅತಿಮಾನುಷ, ಅಮಾನುಷ ಸಂಗತಿಗಳ ಬಗೆಗೆ ಬಹುಹಿಂದಿನ ಕಲ್ಪನೆಗಳು, ಪ್ರಕೃತಿಯ ಗೊಚರ ಮತ್ತು ಅಗೋಚರ ಶಕ್ತಿಗಳ ಬಗೆಗೆ ಜನರ ಅಭಿಪ್ರಾಯಗಳು, ಇವೆಲ್ಲವನ್ನೂ ತಿಳಿದುಕೊಳ್ಳುವುದಕ್ಕೆ ಪುರಾಣಗಳು ಪ್ರಮುಖ ಸಾಧನಗಳಾಗಿವೆ.
’ಪುರಾಣ’ ದ ಪರಿಕಲ್ಪನೆ ಸಾಹಿತ್ಯ ರಚನೆಯಲ್ಲಿ ಬೆಳೆದುಬಂದ ಬಗೆ, ಪುರಾಣ ಸಿದ್ದಾಂತಗಳು, ಪುರಾಣ ಮತ್ತು ಸಾಹಿತ್ಯದ ನಡುವಿನ ಸಂಬಂಧಗಳು, ಪುರಾಣ ಮತ್ತು ವಿಮರ್ಶೆಗಳ ಹಿನ್ನಲೆಯಲ್ಲಿರುವ ವ್ಯಾಖ್ಯಾನಗಳನ್ನು ’ಪುರಾಣ’ ಕೃತಿ ಪ್ರಸ್ತಾಪಿಸುತ್ತದೆ.
ಡಾ. ಕೆ.ಎಲ್. ಗೋಪಾಲಕೃಷ್ಣಯ್ಯ ಅವರು ಮೂಲತಃ (ಜನನ: 18-07-1938) ಕಳಸಪುರದವರು. ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಕಾಲೇಜು ಅಧ್ಯಾಪಕರಾಗಿ ನಿವೃತ್ತರು. ಚಿಂತಕರು. ಹೊಸತು ಮಾಸಪತ್ರಿಕೆಯ ಸಹ ಸಂಪಾದಕರು. ಕೃತಿಗಳು: ತಿರುವುಗಳು (ಕಾದಂಬರಿ), ಸಮಾಜವಾದ ಪರಿಚಯ; ಶತಮಾನದ ಅಂಚಿನಲ್ಲಿ ಶಿಕ್ಷಣ; ಧರ್ಮ ನಿರಪೇಕ್ಷತೆ ಮತ್ತು ಅಲ್ಪಸಂಖ್ಯಾತರು, ಭಾರತೀಯ ಇತಿಹಾಸದ ವೈಲಕ್ಷಣಗಳು (ಅನುವಾದಿತ ಕೃತಿಗಳು), ಕನ್ನಡ ಸಾಹಿತ್ಯದಲ್ಲಿ ಪುರಾಣ ಪ್ರಜ್ಞೆ(ಪಿಎಚ್ ಡಿ ಮಹಾಪ್ರಬಂಧ) ಸಾಹಿತ್ಯ ಸಂವಾದ, ಇತಿಹಾಸದ ರಾಜಕೀಯ (ವಿಮರ್ಶೆ/ಸಂಶೋಧನೆ), ಪುರಾಣ (ವಿಮರ್ಶೆ) ಭೌತವಾದೀಯ ಚಿಂತನೆಗಳು, ಯಶವಂತ ಚಿತ್ತಾಲ (ಜೀವನ ಚಿತ್ರಣ), ವಿಮರ್ಶೆಯ ದಾರಿ-1, ಪ್ರೌಢಶಾಲಾ ಕನ್ನಡ ಕೈಪಿಡಿ,ಭಾಷೆಯ ಬೆಳಕು, ...
READ MORE