ಕಾವ್ಯದ ಓದು ಕೊನೆಯಾಗದು. ಅರಿವಿನ ಸಹವಾಸದಲ್ಲಿ ಹೊಸತನವನ್ನು ಪಡೆಯುತ್ತಲೇ ಹೋಗುತ್ತದೆ. ಕೆರೆಗೆ ಹಾರ ಎಂಬ ಜಾನಪದ ಕವಿತೆ ಕುರಿತು ತಿ.ನಂ. ಶ್ರೀಕಂಠಯ್ಯ, ನಾಗವರ್ಮನ ಒಂದು ಪದ್ಯಾನುಸಂಧಾನ ಸರೋವರದ ಸಿರಿಗನ್ನಡಿ ಕುರಿತು ಕುವೆಂಪು, ಪಂಪನ ಕವಿತೆ; ಅನುಸಂಧಾನ ಮಾರ್ಗ ಕುರಿತು ಕೆ.ವಿ.ಸುಬ್ಬಣ್ಣ, ರನ್ನನ ಒಂದು ಪದ್ಯ: ಕಂ.ಕೊಂ.ಕೌಂ ಕುರಿತು ಪೋಲಂಕಿ ರಾಮಮೂರ್ತಿ ಹೀಗೆ ವಿವಿಧ ಲೇಖಕರು-ಚಿಂತಕರು-ವಿಮರ್ಶಕರು ಬರೆದ ಕಾವ್ಯಗಳ ಸುಮಾರು 31 ವಿಮರ್ಶಾ ಲೇಖನಗಳನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
ಕಾವ್ಯ ಸಾಹಿತ್ಯ ಕುರಿತ ಅಭ್ಯಾಸಿಗಳಿಗೆ ಇಲ್ಲಿಯ ಲೇಖನಗಳು ಅಸಂಖ್ಯಾತ ಸುಳಿವುಗಳನ್ನು-ಒಳನೋಟಗಳನ್ನು ನೀಡುತ್ತದೆ. ವಿವಿಧ ಕಾವ್ಯದ ಮೇಲೆ ಹಿರಿಯ ತಲೆಮಾರಿನ ಲೇಖಕರು ಬರೆದ ವಿಮರ್ಶೆಗಳಿಂದ ಹಿಡಿದು ಇತ್ತೀಷೆಗೆ ಬರೆಯುವ ಸಾಹಿತಿಗಳವರೆಗಿನ ವಿಮರ್ಶಾತ್ಮಕ ಲೇಖನಗಳು ಇಲ್ಲಿವೆ. ಕಾವ್ಯ ವಿಮರ್ಶೆಗಳ ಅಧ್ಯಯನ ದೃಷ್ಟಿಯಿಂದ ಈ ಕೃತಿ ಮಾರ್ಗದರ್ಶಿಯಾಗಿದೆ.
ಲೇಖಕ ಡಿ. ಡಿ. ರಾಮಕೃಷ್ಣ ಅವರು ಮೈಸೂರಿನವರು. 1982ರ ಡಿಸೆಂಬರ್ ೦9 ರಂದು ಜನನ. ಮೈಸೂರು ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ಪ್ರಾಯೋಗಿಕ ವಿಮರ್ಶೆ ಕಾವ್ಯಾನುಸಂದಾನ ಕೃತಿ ರಚಿಸಿದ್ದಾರೆ. ...
READ MORE