ಕ್ರಿ.ಶ. 1700ರ ನಂತರದ ಕಾವ್ಯ-ನಾಟಕ ವಿಮರ್ಶೆ ಹಳಗನ್ನಡದ ಕವಿಗಳು ಮತ್ತವರ ಕೃತಿಗಳ ಬಗ್ಗೆ ಈ ಗ್ರಂಥದಲ್ಲಿ ಅಪೂರ್ವ ಒಳನೋಟಗಳಿವೆ. ಕನ್ನಡದ ಪ್ರಥಮ ಶಾಸನವಾದ 'ಹಲ್ಮಡಿ ಶಾಸನ' ಹಾಗು ಕನ್ನಡದಲ್ಲಿ ಮೊದಲು ಉಪಲಬ್ಧವಾಗಿರುವ ನೃಪತುಂಗನ 'ಕವಿರಾಜಮಾರ್ಗ'ದಿಂದ ಹಿಡಿದು ಶಾಂತಕವಿ, ಮುದ್ದಣ್ಣನ ಕಾವ್ಯಕೃತಿವರೆಗಿನ ವಿಮರ್ಶಾತ್ಮಕ ಬರಹಗಳು ಈ ಕೃತಿಯಲ್ಲಿದೆ. ಈ ಕೃತಿ ಹೊಂದಿರುವ ಅಧ್ಯಾಯಗಳು ಹೀಗಿವೆ: ಹಿಡಿ ಶಾಸನ , ಕವಿರಾಜಮಾರ್ಗ , ಮಾರ್ಗ ಮತ್ತು ದೇಸಿ ,ವಡ್ಡರಾಧನೆ , ಹಳೆಗನ್ನಡ ಕವಿ-ಕಾವ್ಯ ವಿಮರ್ಶೆ , ವಚನ ಸಾಹಿತ್ಯ ವಿಮರ್ಶೆ , ದಾಸರು - ದಾಸ ಸಾಹಿತ್ಯ ವಿಮರ್ಶೆ, ಜನಪದ ಕಾವ್ಯ
ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು 12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...
READ MORE