’ಅಭಿಮುಖ’ ಹತ್ತೊಂಬತ್ತು ಪ್ರಬಂಧಗಳ ಸಂಕಲನ. ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರ ಓದಿನ ಹರವು ದೊಡ್ಡದಿದ್ದು ವಿಷಯ ವೈವಿಧ್ಯತೆ, ವಿಮರ್ಶಾ ದೃಷ್ಟಿಕೋನ ಈ ಕೃತಿಯಲ್ಲಿ ಅನಾವರಣಗೊಂಡಿದೆ. “ಕವಿ ಮತ್ತು ವಿಮರ್ಶಕ ಜಿ .ಎಸ್. ಆಮೂರರ ಪದಗಳನ್ನು ಸಮೀಕ್ಷಿಸುತ್ತಲೇ ಟಿ. ಪಿ. ಅಶೋಕ ಅವರ ವಿಮರ್ಶಾ ಪ್ರಬಂಧಗಳ ಅನನ್ಯತೆಯನ್ನು ಮೆಚ್ಚುತ್ತಾರೆ. ಕತೆಗಾರ ಆಲ್ಬರ್ಟ್ ಕಮೂವಿನ ‘ಅನ್ಯ’ವನ್ನು (Outsider) ಮತ್ತೆ ಓದುವಂತೆ ನಮ್ಮನ್ನು ತೋರಿಸುವ ಲೇಖನ ಇಲ್ಲಿದೆ. ಮರಾಠಿ ಉದ್ದಾಮ ಲೇಖಕ ಭಾಲಚಂದ್ರ ನೆಮಾಡೆ ಅವರೊಂದಿಗಿನ ಇವರ ಸಂದರ್ಶನ ಮಲ್ಲಿಕಾರ್ಜುನ ಅವರಿಗಿರುವ ಸಾಹಿತ್ಯ ಪ್ರೀತಿ, ಆಸ್ಥೆ ಮತ್ತು ಕೌತುಕ ಸ್ವಭಾವವನ್ನು ತೋರಿಸುತ್ತದೆ” ಎಂದು ಕೃತಿಯ ಕುರಿತು ಚರ್ಚಿಸಿದ್ದಾರೆ ಶ್ಯಾಮಸುಂದರ ಬಿದರಕುಂದಿ.
ಲೇಖಕ ಮಲ್ಲಿಕಾರ್ಜುನ ಹಿರೇಮಠ ಅವರದ್ದು ವಿವೇಚನಾಪೂರ್ಣ ಸಾಹಿತ್ಯ ಮತ್ತು ವ್ಯಕ್ತಿತ್ವ. ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ 1946 ಜೂನ್ 05ರಂದು. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸದ್ಯ ನಿವೃತ್ತರಾಗಿದ್ದಾರೆ. 'ಆಕ್ವೇರಿಯಂ ಮೀನು' ಅವರ ಮೊದಲ ಕವನ ಸಂಕಲನ 1974ರಲ್ಲಿ ಪ್ರಕಟವಾಯಿತು. ‘ಅಮೀನಪುರದ ಸಂತೆ, ಜ್ಞಾನೇಶ್ವರನ ನಾಡಿನಲ್ಲಿ (ಪ್ರವಾಸ ಕಥನ), ಅಂತರ್ಗತ (ವಿಮರ್ಶೆ), ಅಭಿಮುಖ (ವಿಮರ್ಶೆ), ಹವನ (ಕಾದಂಬರಿ), 'ಮೊಲೆವಾಲು ನಂಜಾಗಿ' (ಕತಾ ಸಂಕಲನ), ಮೂರುಸಂಜೆ ಮುಂದ ಧಾರವಾಡ (ಲಲಿತ ಪ್ರಬಂಧಗಳು), ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಆಭಿವ್ಯಕ್ತಿ (ವಿಮರ್ಶೆ)’ ಅವರ ಪ್ರಮುಖ ಕೃತಿಗಳು. ಅವರ ಸಾಹಿತ್ಯ ಸೇವೆಗೆ ‘ಕನಾಟಕ ...
READ MORE