ಸಾಮಯಿಕ

Author : ತಾರಿಣಿ ಶುಭದಾಯಿನಿ .ಆರ್

Pages 309

₹ 180.00




Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ತಾರಿಣಿ ಅವರ ವಿಮರ್ಶಾ- ವೈಚಾರಿಕ ಬರಗಳನ್ನು ಒಳಗೊಂಡಿರುವ ಕೃತಿಯಿದು. ಈ ಗ್ರಂಥದ ಬರಹಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯ ಭಾಗ ಮಹಿಳಾ ಪುಟ ವಿಭಾಗದಲ್ಲಿ ‘ಮಹಿಳಾವಾದಿ ರನ್ನನ ಅತ್ತಿಮಬ್ಬೆ ದ್ರೌಪದಿಯರು, ಹೆಣ್ಣುಮಾರ್ಗಿ ಕುವೆಂಪು, ಕನ್ನಡ ಸಾಹಿತ್ಯದ ನಾಳೆಗಳು- ಮಹಿಳಾ ಸಾಹಿತ್ಯ ಕನಕದಾಸರ ಕಾವ್ಯದಲ್ಲಿ ಸ್ತ್ರೀಪರ ಮೌಲ್ಯಗಳು, ಮಹಿಳಾ ವಿಚಾರಸಾಹಿತ್ಯ ಚರಿತ್ರೆಗೊಂದು ಪ್ರಸ್ತಾವನೆ. ಸಾಹಿತ್ಯ ಪುಟ ವಿಭಾಗದಲ್ಲಿ ಕುವೆಂಪು ಕಾವ್ಯ, ಕೆಎಸ್ ನ ಮೈಸೂರು ಮಲ್ಲಿಗೆ, ಎಲ್. ಹನುಮಂತಯ್ಯನವರ ಕಾವ್ಯ, ಚಿತ್ರದುರ್ಗದ ಗದ್ಯ ಸಾಹಿತ್ಯ ಲೇಖನಗಳಿವೆ. ವಿಚಾರ ಪುಟವನ್ನು ಎರಡು ಭಾಗಗಳಾಗಿ ವಿಭಾಗಿಸಲಾಗಿದೆ. ಮೊದಲನೆಯ ಭಾಗದಲ್ಲಿ ಭಾರತೀಯ ಡಯಾಸ್ಪೋರಾ ಪರಿಚಯ, ನಿರ್ವಸಾಹತೀಕರಣ: ಸ್ವರೂಪ, ಸಂಗತಿ ಬರಹಗಳಿದ್ದರೆ, ಎರಡನೇ ಭಾಗದಲ್ಲಿ ವಿದ್ಯಾದಾಯಿನಿ, ಆರಂಭದ ಲೇಖಕಿಯರು ಮತ್ತು ವಸಾಹತು ಶಿಕ್ಷಣ, ಶೆಲ್ಲ ಕುಟ್ಟಿ ಹೇಳಿದ್ದು ಲೇಖನಗಳಿವೆ. ಈ ಗ್ರಂಥದ ಬರಹಗಳ ಬಗ್ಗೆ ಶೈಲಜಾ ಹಿರೇಮಠ ಅವರು ‘ಸಾಮಯಿಕ ಕೃತಿಯಲ್ಲಿ ಬಹುಪಾಲು ಲೇಖನಗಳು ಮಹಿಳಾ ವಿಮೋಚನೆಯನ್ನು ಬಯಸುವ ರಾಜಕೀಯ ಸಿದ್ಧಾಂತವನ್ನು ಮಂಡಿಸುತ್ತವೆ. ಜಾತಿ ಹಾಗೂ ವರ್ಗಗಳಿಗೆ ಅನುಗುಣವಾಗಿರುವ ಲಿಂಗಾಧಾರಿತ ಅಸಮಾನತೆಯ ಹಾಗೂ ಶೋಷಣೆಯ ಸಂಕೀರ್ಣತೆಯನ್ನು ತಾರಿಣಿಯವರ ಬರವಣಿಗೆ ಹಿಡಿದಿಟ್ಟಿದೆ’ ಎಂದು ವಿವರಿಸಿದ್ದಾರೆ.

About the Author

ತಾರಿಣಿ ಶುಭದಾಯಿನಿ .ಆರ್
(09 January 1971)

ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು.  ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ.  ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ. ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ...

READ MORE

Related Books