ವಿಮರ್ಶೆ

Author : ಎಂ.ಎಸ್. ಆಶಾದೇವಿ

Pages 360

₹ 260.00




Year of Publication: 2020
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ , ಬೆಂಗಳೂರು-560018

Synopsys

ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಸಾಹಿತ್ಯ ಸಂಪುಟ ಮಾಲೆಯಡಿ ಪ್ರಕಟಿತ ಕೃತಿ-ವಿಮರ್ಶೆ- ಡಾ. ಮಲ್ಲಿಕಾ ಘಂಟಿ ಮಾಲಿಕೆಯ ಸಂಪಾದಕರು ಮತ್ತು ಡಾ. ಎಂ.ಎಸ್. ಆಶಾದೇವಿ ಸಂಪಾದಕರು.ಶ್ಯಾಮಲಾದೇವಿ ಬೆಳಗಾಂವಕರ್ ಅವರ ಸಾಹಿತ್ಯ -ಸ್ತ್ರೀಯರ ಸ್ವಭಾವಸಿದ್ಧ ಕ್ಷೇತ್ರ, ಗೀತಾ ದೇಸಾಯಿ ಅವರ ಆಧುನಿಕ ಮಹಿಳಾ ಕಥಾ ಸಾಹಿತ್ಯದಲ್ಲಿ ಸಮಕಾಲೀನ ಪ್ರಜ್ಞೆ, ಡಾ. ಅನುಪಮಾ ನಿರಂಜನ ಅವರ ವಿದ್ಯುಲ್ಲತಾ: ಒಂದು ವಿಶ್ಲೇಷಣೆ, ಡಾ. ಶೈಲಜಾ ಉಡಚಣ ಅವರ ರನ್ನನು ಚಿತ್ರಿಸಿದ ಇತರೆ ಸ್ತ್ರೀ ಪಾತ್ರಗಳು, ಟಿ.ಸುನಂದಮ್ಮ ಅವರ ಮಹಿಳಾ ಸಂವೇದನೆ ಮತ್ತು ನಮ್ಮ ಬರಹಗಾರ್ತಿಯರು, ಡಾ. ವಿಜಯಾ ದಬ್ಬೆ ಅವರ ಕನ್ನಡ ಸಾಹಿತ್ಯ : ಒಂದು ಸ್ತ್ರೀಪರ ದೃಷ್ಟಿ, ಡಾ. ಬಿ.ಎನ್. ಸುಮಿತ್ರಾಬಾಯಿ ಅವರ ಕುವೆಂಪು ಕಾವ್ಯದಲ್ಲಿನ ಸ್ತ್ರೀ ದರ್ಶನಂ, ಡಾ. ಪ್ರೀತಿ ಶುಭಚಂದ್ರ ಅವರ ಮಹಿಳಾ ಸಂಶೋಧನೆ, ಹೀಗೆ ಒಟ್ಟು 24 ಲೇಖಕಿಯರ ಸ್ತ್ರೀವಾದಿ ಚಿಂತನೆಗಳ ಬರಹಗಳಿವೆ.

ಕೃತಿಯ ಪ್ರಧಾನ ಸಂಪಾದಕ ನಾಡೋಜ ಡಾ. ಮನು ಬಳಿಗಾರ ‘ಕನ್ನಡ ಲೇಖಕಿಯರ ಅನುಭವ, ಆಲೋಚನೆ, ಆಳದ ತಲ್ಲಣ ಮತ್ತು ಪ್ರತಿಭಟನೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತಿಗೊಂಡ ಬಗೆಯನ್ನು ಈ ಮಹಿಳಾ ಸಂಪುಟವು ಹಿಡಿದು ಇಟ್ಟಿದೆ. ಹೆಣ್ಣು ಮತ್ತು ಗಂಡಿನ ಸಂವೇದನೆಗಳ ನಡುವಿನ ಭಿನ್ನತೆಗಳನ್ನು ಮತ್ತು ಸಾಮ್ಯತೆಗಳನ್ನು ಗುರುತಿಸಲು ಈ ಸಂಪುಟವು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

 

About the Author

ಎಂ.ಎಸ್. ಆಶಾದೇವಿ
(26 February 1966)

ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26 ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಡಿ.ಆರ್.ನಾಗರಾಜ್ ಮಾರ್ಗದರ್ಶನದಲ್ಲಿ ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ ಕುರಿತು ಪಿ.ಎಚ್ಡಿ. ಸ್ತ್ರೀಮತವನುತ್ತರಿಸಲಾಗದೇ(ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳು) ಉರಿಚಮ್ಮಾಳಿಗೆ(ಡಿ.ಆರ್.ನಾಗರಾಜ ಅವರ ದಿ ಪ್ಲೇಮಿಂಗ್ ಫೀಟ್ ಕೃತಿಯ ಅನುವಾದ). ವಚನ ಪ್ರವೇಶ( ಸಂಪಾದನೆ). ಭಾರತದ ಬಂಗಾರ ಪಿ.ಟಿ.ಉಷಾ, ಇವರ ಪ್ರಮುಖ ಕೃತಿಗಳು. ವಿವಿಧ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ. ಪ್ರಸ್ತುತ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ...

READ MORE

Related Books