ಲೇಖಕ ಪ್ರಭಾಕರ ಆಚಾರ್ಯ ಅವರ ಮೊದಲ ಕನ್ನಡ ಕೃತಿ ’ಕವಿತೆಯ ಓದು’. ಲೇಖಕರು ತಮ್ಮ ಕವಿತೆಯ ಓದಿನ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಅನುಭವದ ವಿಶ್ಲೇಷಣೆಗೆ ಬೇಕಾದ ಕವಿತೆಯ ಲಯ, ಪ್ರತಿಮೆ, ಸಂಕೇತ, ಕಾವ್ಯ ವಸ್ತು, ಧ್ವನಿ, ಸರಳವಾದ ರಚನೆಗಳ ಬಗೆಗಿನ ಇವರ ಅಭಿಪ್ರಾಯವನ್ನು ಈ ಕೃತಿಯಲ್ಲಿ ಅಭಿವ್ಯಕ್ತಿಸಿದ್ಧಾರೆ.
ಮಗುವಿನ ಮಾತು, ನೆನಪಿನಲ್ಲಿ ಉಳಿಯುವ ಮಾತು, ಆಡುಮಾತಿನ ಭಾಷೆ, ಕವಿತೆಯ ಅವೈಯಕ್ತಿಕತೆ, ಲಯ ಮತ್ತು ರಿದಮ್, ಕನ್ನಡ ಕವಿತೆಯ ಲಯ, ಪ್ರತಿಮೆ ಮತ್ತು ಸಂಕೇತ, ಧ್ವನಿ ಸಿದ್ದಾಂತ, ಮುಕ್ತ ಛಂದಸ್ಸು, ಕವಿ ಮೌಢ್ಯ, ಕವಿತೆ ಓದಿ ಏನು ಲಾಭ ? , ಗದ್ಯ ಸಾಹಿತ್ಯದಲ್ಲಿ ಕಾವ್ಯಗುಣ ತೋಳ್ಪಾಡಿ ಮತ್ತು ವೈದ್ಯ ಮುಂತಾದ ಹಲವಾರು ಬರಹಗಳನ್ನು ಲೇಖಕರು ತಮ್ಮ ಈ ಕೃತಿಯಲ್ಲಿ ಕವಿತೆಯ ಓದಿನ ಅನುಭವಗಳ ಜೊತೆ ಅವಲೋಕಿಸಿದ್ದಾರೆ.
ಪತ್ರಕರ್ತ-ಲೇಖಕ ಪ್ರಭಾಕರ ಆಚಾರ್ಯ ಮೂಲತಃ ಉಡುಪಿಯವರು. ಅವರ ಮೊದಲ ಕೃತಿ ‘ಕವಿತೆಯ ಓದು’. ಅನುಭವದ ವಿಶ್ಲೇಷಣೆಗೆ ಬೇಕಾದ ಕವಿತೆಯ ಲಯ, ಪ್ರತಿಮೆ, ಸಂಕೇತ, ಕಾವ್ಯ ವಸ್ತು, ಧ್ವನಿಗಳ ಕುರಿತು ತಮ್ಮ ಅಭಿಪ್ರಾಯವನ್ನು ಈ ಕೃತಿಯಲ್ಲಿ ಅಭಿವ್ಯಕ್ತಿಸಿದ್ಧಾರೆ. ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ-2013