`ಗಾಂಧಿ ಹತ್ಯೆಗೆ ಕಾರಣಗಳು ಮತ್ತು ಕೈವಾಡಗಳು' ಎಂಬ ಪುಸ್ತಕವನ್ನು ಭೀಮಂಡ ಈ. ಕುಶಾಲಪ್ಪ ಅವರು ರಚಿಸಿ, ತಾವೇ ಸ್ವತಃ ಪ್ರಕಟಿಸಿರುವರು. ಗಾಂಧಿಯವರು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಹಲವು ತತ್ವ, ಸಿದ್ಧಾಂತಗಳನ್ನು ಒರೆಗೆ ಹಚ್ಚಿ, ಕ್ಷಕಿರಣ ಪರೀಕ್ಷೆಗೆ ಗುರಿಮಾಡಿ, ಅವರ ತತ್ವಗಳೇ ಹೇಗೆ ಅವರ ಹತ್ಯೆಗೆ ಕಾರಣವಾಯಿತು ಎಂಬುದನ್ನು ಪರಿಶೀಲಿಸುವ ಒಂದು ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ. ಜತೆಗೆ, ಗಾಂಧೀಜಿಯವರನ್ನು ಆರಾಧನಾ ಭಾವದಲ್ಲಿ ನೋಡದೇ, ಅವರು ಮಾಡಿರಬಹುದಾದ ತಪ್ಪುಗಳನ್ನು ವಿಶ್ಲೇಷಿಸುವ ಪ್ರಯತ್ನವೂ ಇಲ್ಲಿ ನಡೆದಿದೆ. ಲೇಖಕರು ನಾನಾ ದಾಖಲೆ ಗಳನ್ನು ಪರಿಶೀಲಿಸಿ, ಅವುಗಳ ಕೆಲವು ಅಂಶಗಳನ್ನು ಇಲ್ಲಿ ಉದ್ದರಿಸಿದ್ದಾರೆ. ಕಪೂರ್ ಆಯೋಗದ ತನಿಖೆಯ ವಿವರ ಗಳನ್ನು ಸಹ ಇಲ್ಲಿ ಬಳಸಲಾಗಿದೆ. ಆದರೆ ಈ ವಿಶ್ಲೇಷಣೆಗೆ ಪೂರಕವಾಗಿ, ಇನ್ನಷ್ಟು ಆಳವಾದ ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಜತೆಗೆ ಪುಸ್ತಕದುದ್ದಕ್ಕೂ ಹಲವು ಅಕ್ಷರದೋಷಗಳು ಎದ್ದು ಕಾಣುತ್ತವೆ.
ಭೀಮಂಡ ಈ ಕುಶಾಲಪ್ಪ ಮೂಲತಃ ಕೊಡಗಿನ ಪಾಲೂರಿನವರು. ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಅವರು ಮೂಲತಃ ಕೃಷಿಕರಾಗಿರುತ್ತಾರೆ . ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಕಾವೇರಿ (1982) ಪ್ರಬಂಧ ಸಂಕಲನವನ್ನು ಪ್ರಕಟಿಸಿದ ಅವರು 1993 ರಲ್ಲಿ ಕೊಡಗು ಚರಿತ್ರೆ,ನಿವಾಸಿಗಳು ಮತ್ತು ಪ್ರಭಾವ ಕ್ರತಿಯನ್ನು ದಿಗ್ದರ್ಶಿಸಿರುವರು. ಕೃತಿಗಳು: ಗಾಂಧಿ- ಸಂಗ್ರಾಮದ ರಹಸ್ಯಪುಟಗಳು , ಕೊಡಗು-ಚರಿತ್ರೆಯ ಮೇಲೆ ಹೊಸಬೆಳಕು, ಗಾಂಧಿ -ಹತ್ಯೆಗೆ ಕಾರಣಗಳು ಮತ್ತು ಕೈವಾಡಗಳು ...
READ MORE