ಶಂಕರ್ ಮೊಕಾಶಿ ಪುಣೇಕರವರು ರಚಿಸಿದ ವ್ಯಕ್ತಿ ಚಿತ್ರ ಮತ್ತು ವಿಮರ್ಶ ಲೇಖನದ ಸಂಕಲನವೇ ಈ ಕೃತಿ. ಈ ಪುಸ್ತಕವು ವಸ್ತುನಿಷ್ಠತೆ , ಸಾಹಿತ್ಯದ ಕಾರಣಕ್ಕೆ ವಿಶೇಷವಾಗಿ ಗುರುತಿಸಿಕೊಂಡಿದೆ. ಗೋಕಾಕ , ಗಂಗಾಂಧರ, ಚಿತ್ತಾಲ, ರಾಷ್ಟ್ರ ಕವಿ ಕುವೆಂಪು, ಮಾಸ್ತಿ,ಭೂಸನೂರ ಮಠ, ಗೋವಿಂದ ಪೈ, ಟಿ.ಪಿ ಕೈಲಾಸಂ, ಬಿ.ಪುಟ್ಟಸಾಮಯ್ಯ, ಚದುರಂಗ ಕಣವಿ, ಮುಂತಾದ ಶ್ರೇಷ್ಠ ಕವಿಗಳ , ವ್ಯಕ್ತಿಚಿತ್ರದ ಜೊತೆಗೆ , ಲೇಖನಗಳನ್ನು ವಿಮರ್ಶಿಸುವ ಹೊಸ ಆಯಾಮವನ್ನು ಈ ಕೃತಿ ಪರಿಚಯಿಸುತ್ತದೆ. ಇವರು ಬರೆದ ಈ ಲೇಖನಗಳನ್ನು ಓದುದರಿಂದ ಹೊಸತರದ ವಿಮರ್ಶ ಕೌಶಲ್ಯ ಹುಟ್ಟಿಕೊಳ್ಳುತ್ತದೆ.
ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ ಕಾಲ ವಿಜಾಪುರ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಎಂ.ಎ.ಪದವಿ ಮತ್ತು ಪಿಎಚ್.ಡಿ ಪದವಿಯನ್ನು ಪಡೆದರು. ಬೆಳಗಾವಿಯ ಆರ್.ಪಿ.ಡಿ.ಕಾಲೇಜು, ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು, ಐ.ಐ.ಟಿಗಳಲ್ಲಿ ಅಧ್ಯಾಪಕರಾಗಿ, ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದರು. 1988ರಲ್ಲಿ ನಿವೃತ್ತಿಯ ನಂತರ ಮೂರು ವರ್ಷಗಳ ಕಾಲ ಶ್ರೀ ಸತ್ಯಸಾಯಿಬಾಬಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕನ್ನಡ ಮತ್ತು ಇಂಗ್ಲಿಷ್ ...
READ MORE