‘ತ್ರಿವೇಣಿಯವರ ಕಾದಂಬರಿಗಳು’ ಲೇಖಕಿ ವಿಜಯಶ್ರೀ ಸಬರದ ಅವರ ಬರೆದಿರುವ ಕೃತಿ. ಕಾದಂಬರಿ ಸಾಹಿತ್ಯದಲ್ಲಿ, ಅದೂ ಮಹಿಳಾ ಲೇಖಕಿಯರಲ್ಲಿ ಎದ್ದು ಕೇಳಿಬರುವ ಹೆಸರೆಂದರೆ ತ್ರಿವೇಣಿಯವರದು. ಅವ ಕಾದಂಬರಿಗಳನ್ನು ಮೊದಲಿನಿಂದಲೂ ಓದುತ್ತಾ ಬಂದ ನನಗೆ, ಅವುಗಳ ಬಗೆಗೆ ಬರೆಯಬೇಕೆಂದೆನಿಸಿತ್ತು. ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದವರು ದಿ. 21-12-1978ರಂದು ಬೀದರ ಜಿಲ್ಲೆಯ ಬಗದಲದಲ್ಲಿ ಉಪನ್ಯಾಸವನ್ನು ಏರ್ಪಡಿಸಿದ್ದರು. ಆಗ ನಾನು ಮಾಡಿದ ಉಪನ್ಯಾಸವೇ ಈಗ ಪುಸ್ತಿಕೆಯ ರೂಪದಲ್ಲಿ ಪ್ರಕಟವಾಗಿದೆ ಎಂದಿದ್ದಾರೆ ಲೇಖಕಿ ವಿಜಯಶ್ರೀ ಸಬರದ. ಈ ಕೃತಿಯಲ್ಲಿ ತ್ರಿವೇಣಿಯವರು, ತ್ರಿವೇಣಿಯವರ ಕಾದಂಬರಿಗಳಲ್ಲಿ- (1) ಸಾಮಾಜಿಕ ಪ್ರಜ್ಞೆ, (2) ಮಾನಸಿಕ ತೊಳಲಾಟ, (3) ಮನರಂಜನೆ, (4) ವಸ್ತು-ಶೈಲಿ-ಸಂಭಾಷಣೆ ಕನ್ನಡ ಸಾಹಿತ್ಯದಲ್ಲಿ ತ್ರಿವೇಣಿಯವರ ಸ್ಥಾನ, ತ್ರಿವೇಣಿಯವರ ಕೃತಿಗಳು ಎಂಬ ಲೇಖನಗಳು ಸಂಕಲನಗೊಂಡಿವೆ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE