ಕಾವ್ಯ ನಾಡಿ

Author : ಅರವಿಂದ ಚೊಕ್ಕಾಡಿ

Pages 256

₹ 240.00




Year of Publication: 2021
Published by: ಮಡಿಲು ಪ್ರಕಾಶನ
Address: ನಂ.77, 2ನೇ ಮುಖ್ಯರಸ್ತೆ, ಐಶ್ವರ್ಯ ನಗರ, ಕುವೆಂಪುನಗರ ಎನ್. ಬ್ಲಾಕ್, ಮೈಸೂರು- 570025
Phone: 9844212231

Synopsys

ಸಾಹಿತಿ ವಾಸುದೇವ ನಾಡಿಗರ ಕವಿತೆಗಳ ಕುರಿತಾದ ವಿಮರ್ಶಾ ಲೇಖನಗಳನ್ನೊಳಗೊಂಡ "ಕಾವ್ಯನಾಡಿ" ಕೃತಿಯು ಸಾಹಿತಿ ಅರವಿಂದ ಚೊಕ್ಕಾಡಿಯವರ ಸಂಪಾದಕತ್ವದಲ್ಲಿ ಮೂಡಿ ಬಂದಿದೆ. ವಾಸುದೇವ ನಾಡಿಗರು ಪ್ರಸ್ತುತದಲ್ಲಿ ಕನ್ನಡದಲ್ಲಿ ಕಾವ್ಯ ರಚನೆಮಾಡುತ್ತಿರುವ ಕವಿಗಳಲ್ಲಿ ಬಹು ಮುಖ್ಯರು. ನಾಡಿಗರ ಒಂದು ಆಯ್ದ ಕವಿತೆ ಜೊತೆಗೆ ಅದರ ಬಗೆಗಿನ ವಿಮರ್ಶಾ ಲೇಖನ ಜೊತೆಜೊತೆಯಲ್ಲಿಯೇ ದೊರೆಯುವುದರಿಂದ ಈ ಪುಸ್ತಕ ಗಂಭೀರ ಕಾವ್ಯಾಭ್ಯಾಸಿಗಳಿಗೆ ಮತ್ತು ಸಾಹಿತ್ಯ ವಿದ್ಯಾರ್ಥಿಗಳಿಗೆ ಕವಿತೆಗಳ ಒಳಹೊರಗನ್ನು ಅರಿಯಲು ಸಹಕರಿಸುವ ಒಂದು ಉತ್ತಮ ಆಕರವಾಗಿ ಒದಗಿ ಬರಲಿದೆ. ಸುಬ್ರಾಯ ಚೊಕ್ಕಾಡಿಯವರು, ಸ ರಘುನಾಥರಂತಹ ಹಿರಿಯ ಕವಿ, ಸಾಹಿತಿಗಳಿಂದ ಹಿಡಿದು, ಇತ್ತೀಚೆಗೆ ಬರೆಯಲು ಶುರು ಮಾಡಿರುವ ಹಲವು ಪ್ರತಿಭಾನ್ವಿತರ ಲೇಖನಗಳು ಈ ಕೃತಿಯಲ್ಲಿರುವುದರಿಂದ, ಕನಿಷ್ಟ ಮೂರ್ನಾಲ್ಕು ತಲೆಮಾರಿನ ಸಾಹಿತಿಗಳು ಕವಿತೆಗಳನ್ನು ಹೇಗೆ ಓದಿಕೊಳ್ಳುತ್ತಾರೆ, ಏನೆಲ್ಲ ಗ್ರಹಿಸುತ್ತಾರೆ, ಹೇಗೆ ಅರ್ಥೈಸಿಕೊಳ್ಳುತ್ತಾರೆ, ಹೇಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ, ಅವರುಗಳ ಓದಿನ ಹರವು ಎಷ್ಟಿರುತ್ತದೆ ಎನ್ನುವುದನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸಲು ಈ ಪುಸ್ತಕ ನೆರವಾಗುತ್ತದೆ.

About the Author

ಅರವಿಂದ ಚೊಕ್ಕಾಡಿ
(21 December 1975)

 ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ  ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ  ಬಿ. ಇಡ್. ಪದವೀಧರರಾಗಿರುವ ಇವರು  ಕರ್ನಾಟಕ ರಾಜ್ಯ  ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...

READ MORE

Related Books