ದೇವಚಂದ್ರನ ರಾಜಾವಳಿ ಕಥೆ ಕುರಿತು ನಡೆದ ಸಾಂಸ್ಕೃತಿಕ ಅವಲೋಕನದಲ್ಲಿ ವಿವಿಧ ವಿದ್ವಾಂಸರು ಮಂಡಿಸಿದ ಪ್ರಬಂಧಗಳನ್ನು ಸಂಪಾದಿಸಿ ಡಾ. ವೆಂಕಟೇಶ ಇಂದ್ವಾಡಿ ಅವರು ಕೃತಿ ರೂಪಕ್ಕೆ ತಂದಿದ್ದಾರೆ. ಕೃತಿಯ ಬಗ್ಗೆ ಎಚ್.ಜಿ. ಲಕ್ಕಪ್ಪ ಗೌಡ ಬರೆಯುತ್ತಾ, ’ದೇವಚಂದ್ರನ ರಾಜಾವಳಿ ಕಥೆ ಮೇಲ್ನೋಟಕ್ಕೆ ಕೇವಲ ಸಾಮಾನ್ಯ ಕಥೆಗಳ ಗುಂಪು ಎಂದು ಕಂಡುಬಂದರೂ, ಅದರ ಆಳಕ್ಕೆ ಇಳಿದಂತೆಲ್ಲ ವಿಸ್ತಾರಕ್ಕೆ ಈಜಿದಂತೆಲ್ಲ, ಅದು ಹೊಮ್ಮಿಸುವ ವೈಚಾರಿಕ ಅಲೆಗಳು ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುತ್ತವೆ. ಈ ಕೃತಿಯು 13 ಜನ ವಿದ್ಯಾಂಸರು 13 ಕೋನಗಳಿಂದ ಈ ಕೃತಿಯ ಅಂತರಂಗವನ್ನು ಪ್ರವೇಶ ಮಾಡಿದ ಕಾರಣದಿಂದ ಚಿಮ್ಮಿದ ಬಗೆ ಬಗೆಯ ಪ್ರತಿಕ್ರಿಯೆಗಳು ಸಾಹಿತ್ಯದ ನಿತ್ಯ ಜೀವಂತಿಕೆಯನ್ನು ಪ್ರಸ್ತುತಪಡಿಸುತ್ತವೆ' ಎಂದಿದ್ದಾರೆ.
ಲೇಖಕ ವೆಂಕಟೇಶ ಇಂದ್ವಾಡಿ ಅವರು ಮೂಲತಃ ಮೈಸೂರಿನವರು. ಸದ್ಯ, ಹಂಪಿಯ ಕನ್ನಡ ವಿ.ವಿ. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರು. ಕೃತಿಗಳು: ಧರೆಗೆ ದೊಡ್ಡವರ ಕತೆ : (ಸಂಪಾದನೆ), ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಮಂಟೇಸ್ವಾಮಿ ಪರಂಪರೆ, ನೀಲಗಾರರು: ಸಾಂಸ್ಕೃತಿಕ ಪದಕೋಶ, ದೇವಚಂದ್ರನ ರಾಜಾವಳಿ ಕಥೆ (ಸಂಪಾದನೆ), ದೇವದೇವಿ, ಬಾಲಬಸವ ತುಮುನೆಪ್ಪ ಹಾಡಿದ ಗೋಣಿಬಸಪ್ಪನ ಕಾವ್ಯ, ಮಂಟೇಸ್ವಾಮಿ ಮಹಾಕಾವ್ಯ: ಸಾಂಸ್ಕೃತಿಕ ಮುಖಾಮುಖಿ (ಸಂ), ಮಲೆ ಮಾದಪ್ಪನ ಮಹಾಕಾವ್ಯ: ಸಾಂಸ್ಕೃತಿಕ ಮುಖಾಮುಖಿ , (ಸಂಪಾದನೆ), ಸೂತಕವೆಂಬ ರೂಪಕ : (ಸಂಶೋಧನಾ ಲೇಖನಗಳು), ಸಿರಿ ಜನಪದ ಕಾವ್ಯ: ಸಾಂಸ್ಕೃತಿಕ ಮುಖಾಮುಖಿ , (ಸಂಪಾದನೆ), ಮಂಟೇಸ್ವಾಮಿ ಓದುವ ಪಠ್ಯ, ಏಪ್ಪತ್ತೇಳು ಲೀಲೆಗಳು (ಕವನ ಸಂಕಲನ), ಅಧುನಿಕ ಜನಪದ ರಂಗಭೂಮಿ ಸ್ವರೂಪ ಸಂರಚನೆ. ಪರಮಗುರು ಪರಂಜ್ಯೋತಿ, ಊರೆಂಬುದು ...
READ MORE