ಸಾಹಿತಿ ಡಾ. ಪಿ.ವಿ. ನಾರಾಯಣ ಅವರು ರಚಿಸಿದ ಕೃತಿ-ಕನ್ನಡ ಸಾಹಿತ್ಯ ಪರಂಪರೆ ಮತ್ತು ಜನಪರತೆ. ಕನ್ನಡ ಸಾಹಿತ್ಯಕ್ಕಿರುವ ಸಾವಿರಾರು ವರ್ಷಗಳ ಪರಂಪರೆಯ ಇತಿಹಾಸವನ್ನು ಚರ್ಚಿಸಲಾಗಿದ್ದು, ಜನ ಎಂದರೆ ಸಾಮಾನ್ಯ ಜನತೆ; ಅದರ ಅಂತರಂಗ-ಆಕಾಂಕ್ಷೆ-ತವಕ-ತಲ್ಲಣ-ನಿರೀಕ್ಷೆ-ಜೀವನ ಸ್ವರೂಪ ಹಾಗೂ ಜೀವನದರ್ಶನಗಳನ್ನು ಒಳಗೊಳ್ಳುವುದೇ ಜನಪರತೆ ಎಂದು ಲೇಖಕರು ಹೇಳುತ್ತಾರೆ. ಹೀಗೆ ಜನಪರತೆ ಹಾಗೂ ಕನ್ನಡ ಸಾಹಿತ್ಯ ಪರಂಪರೆಯನ್ನು ತೌಲನಿಕವಾಗಿ ಅಧ್ಯಯನ ನಡೆಸಿ ವಿಶ್ಲೇಷಣೆಗೆ ಒಳಪಡಿಸಿದ್ದೇ ಈ ಕೃತಿ. ಕನ್ನಡ ಸಾಹಿತ್ಯ ಪರಂಪರೆಯನ್ನು ಮೊದಲ ಅವರು ಕವಿರಾಜ ಮಾರ್ಘದಿಂದ ಆರಂಭಿಸುತ್ತಾರೆ. ನಂತರದ ಸಾಹಿತ್ಯದ ಮಾರ್ಗಗಳನ್ನು ಗುರುತಿಸಿ, ವಿಶ್ಲೇಷಿಸುತ್ತಾ ಹೋಗುವುದು ಈ ಕೃತಿಯ ವೈಶಿಷ್ಟ್ಯ.
ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...
READ MORE