ನಿಜವು ತೋರದಲ್ಲ

Author : ಎಚ್.ಎಸ್. ರಾಘವೇಂದ್ರರಾವ್

Pages 264

₹ 300.00




Year of Publication: 2019
Published by: ಸನ್ನಿಧಿ ಪ್ರಕಾಶನ
Address: 5/1, ನಾಗಪ್ಪ ಬೀದಿ, ಶೇಷಾದ್ರಿಪುರಂ,  ಬೆಂಗಳೂರು- 560020

Synopsys

‘ನಿಜವು ತೋರದಲ್ಲ’ ಲೇಖಕ ಎಚ್.ಎಸ್. ರಾಘವೇಂದ್ರರಾವ್ ಅವರ ವಿಮರ್ಶಾ ಲೇಖನಗಳ ಸಂಕಲನ. ಲೇಖಕರು ಬರೆದ ಪ್ರಸ್ತಾವನೆಯಲ್ಲಿ ‘ಈ ಪುಸ್ತಕದ ಬಹುಪಾಲು ಬರಹಗಳು ನೇರವಾಗಿ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿಲ್ಲ. ವಿಮರ್ಶಕರೂ ಮನುಷ್ಯರಾದ್ದರಿಂದ ಸಾಹಿತ್ಯವೆಂಬ ಸಂಸ್ಥೆ ಮತ್ತು ಸಾಹಿತ್ಯ ಕೃತಿಗಳ ಮೇಲಿನ ಸಂಪೂರ್ಣ ಅವಲಂಬನೆ ಸರಿಯಲ್ಲ ಎನ್ನಿಸುತ್ತಿದೆ. ಸಾಹಿತ್ಯ ವಿಮರ್ಶಕನ ಜೀವನದರ್ಶನವು ವಿಮರ್ಶೆಯ ಅಂತರಂಗದಲ್ಲಿಯೇ ಅಡಗಿರುತ್ತದೆ. ಆದರೆ ಅದನ್ನು ಸ್ಥೂಲ ಧೋರಣೆಗಳಾಚೆಗೆ ಗ್ರಹಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ, ಬಹು ಕಾಲದಿಂದಲೂ ನನ್ನನ್ನು ಕಾಡುತ್ತಿರುವ ಸಮಸ್ಯೆಗಳನ್ನು ಕುರಿತು ಬರೆದಿದ್ದೇನೆ ಎಂದು ಹೇಳಿದ್ದಾರೆ.

ಸಂಸ್ಕೃತಿ, ಪ್ರಕೃತಿ ಮತ್ತು ವಿಕೃತಿ: ಕೆಲವು ತಲ್ಲಣಗಳು, ಸಹಜತೆ ಮತ್ತು ಸೌಜನ್ಯ, ಅನುಭವ ಮತ್ತು ತಲ್ಲೀನತೆ, ನೇಪಾಳದಲ್ಲಿ ನೋವು-ನಲಿವು, ಕನ್ನಡ ಸಂಸ್ಕೃತಿ: ಸಂಘರ್ಷ ಮತ್ತು ಸಾಮರಸ್ಯ, ಪರಂಪರೆ ಮತ್ತು ಕವಿಪ್ರತಿಭೆಯ ಮುಖಾ-ಮುಖಿ. ಅನುಭಾವ ಮತ್ತು ಸಮುದಾಯಗಳು, ಕನ್ನಡಶಾಲೆಗಳು, ಸರ್ಕಾರಿ ಶಾಲೆಗಳು ಕಳೆದು ಹೋದಾಗ, ವಿ.ಸೀ.ಯವರ ಲೋಕಸಮೀಕ್ಷೆ: ಒಂದು ಹಿನ್ನೋಟ, ಯು.ಆರ್. ಅನಂತಮೂರ್ತಿ: ನುಡಿ, ನಾಡು, ಬದುಕು. ನುಡಿಯ ಅಸ್ಮಿತೆ: ಡಾ. ರಾಜಕುಮಾರ್, ನೀರ ದಾರಿ, ಚಿಂತನ: ಆಕಾಶವಾಣಿ, ಬೆಂಗಳೂರು, ಲೋಕದರ್ಶನ ಮತ್ತು ಲೋಕರೂಪಣ: ಎರಡು ಮಾಧ್ಯಮಗಳಲ್ಲಿ, ಕಲೆ, ಸಾಹಿತ್ಯ, ಸಿನೆಮಾ..ಇತ್ಯಾದಿ. ಹರಿಯುವ ನದಿಗೆ ಹಾಕಿದ ಒಡ್ಡುಗಳು, ಉನ್ನತ ಶಿಕ್ಷಣದ ಸವಾಲುಗಳು, ಶಾಸ್ತ್ರೀಯ ಕನ್ನಡ: ಕೆಲವು ಅನುಮಾನಗಳು, ಕೆಲವು ಅನಿಸಿಕೆಗಳು, ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ ಲೇಖನಗಳು ಸಂಕಲನಗೊಂಡಿವೆ.

 

About the Author

ಎಚ್.ಎಸ್. ರಾಘವೇಂದ್ರರಾವ್
(01 August 1948)

ಮೂಲತಃ ಚಿತ್ರದುರ್ಗದವರಾದ ರಾಘವೇಂದ್ರರಾವ್ ಅವರು (ಜನನ 1948) ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ನಿವೃತ್ತರಾದವರು. ಕುವೆಂಪು, ಬೇಂದ್ರೆ, ಪು.ತಿ.ನ. ಅವರ ಕಾವ್ಯ ಕುರಿತು ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ಕೆಲಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಹಂಪಿಯಲ್ಲಿ ಕರ್ನಾಟಕ ವಿಶ್ವಕೋಶದ ಸಂಪಾದಕರಾಗಿದ್ದ ರಾಘವೇಂದ್ರರಾವ್ ಅವರ ವಿಮರ್ಶಾ ಕೃತಿಗಳು ‘ವಿಶ್ಲೇಷಣೆ’, ‘ನಿಲುವು’, ‘ಹುಡುಕಾಟ’, ‘ಪ್ರಗತಿಶೀಲತೆ, ‘ಹಾಡೆ ಹಾದಿಯ ತೋರಿತು’. ‘ಬಾಲ ಮೇಧಾವಿ’ ಎಂಬ ಜರ್ಮನ್ ಕತೆಗಳ ಅನುವಾದ ಸಂಕಲನ ಹಾಗೂ ‘ಜನಗಣಮನ’ ಎಂಬ ಲವಲವಿಕೆಯ ಪ್ರವಾಸ ಕಥನ ಪ್ರಕಟಿಸಿದ್ದಾರೆ. ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರಾಗಿರುವ ...

READ MORE

Related Books