ನೋಟ ನಿಲುವು- 1

Author : ಬಸವರಾಜ ಪಿ. ಡೋಣೂರ

Pages 385

₹ 300.00




Year of Publication: 2015
Published by: ಶ್ರೀ ಅನ್ನಪೂರ್ಣ ಪ್ರಕಾಶನ
Address: #15, 6ನೇ ತಿರುವು, ಧನ್ವಂತರಿ ನಿಲಯ, ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 79

Synopsys

‘ನೋಟ ನಿಲುವು -1’ ಲೇಖಕ ಬಸವರಾಜ ಡೋಣೂರರ ವಿಮರ್ಶಾ ಲೇಖನಗಳ ಸಂಕಲನ. 2015ರ ವರೆಗೆ ಡೋಣೂರರು ಬರೆದ ಆಯ್ದ ವಿಮರ್ಶಾ ಲೇಖನಗಳ ಮೊದಲನೆಯ ಸಂಪುಟವಿದು. ಕಳೆದ ನಾಲ್ಕು ವರ್ಷಗಳಲ್ಲಿ ವಿಭಿನ್ನ ಸನ್ನಿವೇಶ, ವಿಭಿನ್ನ ಉದ್ದೇಶಗಳಿಗಾಗಿ ಬರೆದ ಲೇಖನಗಳಲ್ಲಿ ಆಯ್ದ ಲೇಖನಗಳು ಇಲ್ಲಿವೆ. ಜೊತೆಗೆ ಬೇರೆ ಬೇರೆ ವಿಮರ್ಶಾ ಲೇಖನಗಳ ಸಂಗ್ರಹಗಳಲ್ಲಿ ಈಗಾಗಲೇ ಪ್ರಕಟಗೊಂಡ ಲೇಖನಗಳು ಇಲ್ಲಿ ಸೇರಿವೆ. ಗಿರೀಶ ಕಾರ್ನಾಡ, ಜಿ.ಎನ್.ದೇವಿ, ಜಿ.ಬಿ.ಸಜ್ಜನ, ವೀಣಾ ಶಾಂತೇಶ್ವರ ಹಾಗೂ ತೇಜಸ್ವಿ ಕಟ್ಟಿಮನಿ ಅವರ ಸಂದರ್ಶನಗಳ ಜತೆಗೆ ಬಸವರಾಜ ಡೋಣೂರರ ಒಂದು ಸಂದರ್ಶನವೂ ಇಲ್ಲಿದೆ. 

ಈ ಸಂಪುಟದಲ್ಲಿ ಲೇಖಕರು ಭಾರತೀಯ ಮತ್ತು ಕನ್ನಡದ ಮುಖ್ಯ ಲೇಖಕರ ಸಾಹಿತ್ಯವನ್ನು ಅವಲೋಕಿಸಿದ್ದಾರೆ. ಒಮ್ಮೊಮ್ಮೆ ಪರಿಚಯಾತ್ಮಕ ನೆಲೆಯಲ್ಲಿ, ಇನ್ನೊಮ್ಮೆ ಕೃತಿಯ ಕೆಲ ಕೇಂದ್ರಗಳನ್ನು ಗುರುತಿಸಿ, ಚರ್ಚಿಸುವ ನೆಲೆಯಲ್ಲಿ ಬರೆದಿದ್ದಾರೆ.

About the Author

ಬಸವರಾಜ ಪಿ. ಡೋಣೂರ
(26 July 1969)

ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು.  1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...

READ MORE

Related Books