ಜಿ. ಎಚ್. ನಾಯಕರ ವಿಮರ್ಶೆ ಒಂದು ಕ್ಷಣದ ಅಭಿಪ್ರಾಯದ ಅಥವಾ ಪ್ರತಿಕ್ರಿಯೆಯ ರೀತಿಯದ್ದಲ್ಲ. ಮಾತಿನಲ್ಲಿ ವಿನಯವಿದೆ. ಆದರೆ ಈ ವಿನಯವನ್ನು ಹಿಂಜರಿಕೆ ಎಂದು ತಿಳಿಯುವಂತಿಲ್ಲ. ಅನೇಕ ಹಿರಿಯ ವಿಮರ್ಶಕರನ್ನು, ತಮ್ಮ ನೆರೆಹೊರೆಯ ಮನಜ, ಪೋಲಂಕಿ ರಾಮಮೂರ್ತಿ ಮುಂತಾದವರನ್ನು ಅವರು ಸಾಕಷ್ಟು ಕಠಿಣವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಕರ ಟೀಕೆಗಳಲ್ಲಿ ವಿಗ್ರಹಭಂಜಕ ಪ್ರವೃತ್ತಿಯಿಲ್ಲ. ಮೆಚ್ಚುವಷ್ಟೇ ತೀವ್ರವಾಗಿ ಅವರು ಟೀಕಿಸುತ್ತಾರೆ. ಅದು ಅವರ ಭಾವ ತೀವ್ರತೆಯ ಇನ್ನೊಂದು ರೂಪವಷ್ಟೇ. ಈ ಎಲ್ಲಾ ಅಂಶಗಳು ಈ ಕೃತಿಯಲ್ಲಿಯೂ ಚಿತ್ರಿತವಾಗಿದೆ.
’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...
READ MORE