ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಸಂಪಾದಿಸಿದ ವಿಮರ್ಶಾ ಲೇಖನಗಳ ಕೃತಿ-ಪುಸ್ತಕ ದರ್ಪಣ. ಒಟ್ಟು 14 ವಿಮರ್ಶಾ ಲೇಖನಗಳಿವೆ. ಕನ್ನಡ ನಾಡು ಲೇಖಕರ ಸಹಕಾರ ಸಂಘವು ಪ್ರಕಟಿಸಿದ ಪುಸ್ತಕಗಳ ವಿಮರ್ಶೆಯ ಲೇಖನಗಳನ್ನು ಇವರು ಸಂಪಾದಿಸಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ,, ಗಾತ್ರದಲ್ಲಿ ಕಿರಿದಾದರೂ ಹಿರಿದಾದ ಆಶಯ, ದೇಸಾಯಿಯವರ ಕಥೆಗಳ ಸುತ್ತ, ಮಣ್ಣಿನಲ್ಲಿ ಮಿಂದು ಬಂದ ಕಥೆಗಳು, ಶ್ರಮಜೀವಿಗಳ ದನಿ ಗುಳೆ ಸೇರಿದಂತೆ ಹಲವಾರು ವಿಮರ್ಶಾ ಲೇಖನಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...
READ MORE