ಕನ್ನಡದ ಹಿರಿಯ ಮತ್ತು ಯುವ ಮನಸ್ಸುಗಳು ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮಹತ್ವ ಮತ್ತು ಅದರ ಅನನ್ಯತೆ ಕುರಿತು ನಡೆದ ಚರ್ಚೆ ಈ ಗ್ರಂಥದಲ್ಲಿದೆ. ಭಾಷಣ- ವಿಚಾರ ಸಂಕಿರಣಗಳಿಗಿಂತ ಭಿನ್ನವಾದ ಹಾಗೂ ಎಲ್ಲರಿಗೂ ಭಾಗವಹಿಸಲು ಅವಕಾಶ ಇರುವಂತೆ ಚರ್ಚೆಯನ್ನು ರೂಪಿಸಿದ್ದು ರಹಮತ್ ತರೀಕೆರೆ ಅವರ ಹೆಗ್ಗಳಿಕೆ. ಚರ್ಚೆಯ ಮಾತುಗಳನ್ನೇ ಅಕ್ಷರಕ್ಕೆ ಇಳಿಸಿ ಸಂಪಾದಿಸಿ ಪ್ರಕಟಿಸಲಾಗಿದೆ. ಸಂವಾದದಲ್ಲಿ ರಹಮತ್ ತರೀಕೆರೆ, ಕೆ. ರಾಮಯ್ಯ, ಎಂ.ಎಸ್. ಪ್ರಭಾಕರ (ಕಾಮರೂಪಿ), ಫಕೀರ್ ಮುಹಮ್ಮದ್ ಕಟ್ಪಾಡಿ, ಕೆ.ಪಿ. ಸುರೇಶ್, ಬಿಳುಮನೆ ರಾಮದಾಸ್, ಎಚ್. ನಾಗವೇಣಿ, ದೇವು ಪತ್ತಾರ, ಶಿವರಾಮ ಶೆಟ್ಟಿ, ಮಂಜುನಾಥ ಲತಾ, ಎಂ.ವಿ. ವಸು, ಸರ್ಜಾಶಂಕರ ಹರಳಿಮಠ, ಡಿ. ಡಾಮಿನಿಕ್, ತಾರಿಣಿ ಶುಭದಾಯಿನಿ, ಚಂದ್ರಶೇಖರ ನಂಗಲಿ, ದೇವರಾಜ್, ವಿನಯಾ, ಅರುಣ್ ಜೋಳದ ಕೂಡ್ಲಗಿ, ಕೆ.ಪಿ. ನಟರಾಜ, ಎನ್.ಕೆ. ಹನುಮಂತಯ್ಯ, ವಸುಧೇಂದ್ರ,ಬಿ.ಎನ್. ಚಂದ್ರಮೋಹನ್ ಭಾಗವಹಿಸಿದ್ದರು. ಅರುಣ್ ಜೋಳದ ಕೂಡ್ಲಗಿ ಅವರು ಮಲೆಗಳಲ್ಲಿ ಮದುಮಗಳು ಅಧ್ಯಯನಗಳ ಮುಖ್ಯ ಪ್ರವೃತ್ತಿಗಳು ಕುರಿತು ಟಿಪ್ಪಣಿ ಸಿದ್ಧಪಡಿಸಿ ನೀಡಿದ್ದಾರೆ. ಕಾದಂಬರಿಯೊಂದರ ಕುರಿತಾದ ವಿಶಿಷ್ಟ ಸಂವಾದದ ಅಪರೂಪದ ಗ್ರಂಥವಿದು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...
READ MORE