ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಕೃತಿ-ಯುಗಧರ್ಮ ಮತ್ತು ಸಾಹಿತ್ಯ ದರ್ಶನ. ಹೊಸಗನ್ನಡದ ವಿಮರ್ಶಾಕ್ಷೇತ್ರದಲ್ಲಿ ಹೊಸ ಆಲೋಚನೆಯ ಕೃತಿ. ಪ್ರಿಯವಾದದ್ದನ್ನು ಹೇಳಬೇಕು; ಸತ್ಯವನ್ನು ಹೇಳಬೇಕು. ಅಪ್ರಿಯವಾದ ಸತ್ಯವನ್ನು ಎಂದೂ ಹೇಳಬಾರದು ಎಂಬ ಸೂತ್ರಕ್ಕೆ ಕಟ್ಟುಬಿದ್ದ ಪಂಡಿತರು, ದಾಕ್ಷಿಣ್ಯಕ್ಕೆ ಒಳಗಾಗಿ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳುವದೇ ವಿಮರ್ಶೆ ಎಂಬು ಭಾವಿಸಿದವರು ಇದ್ದಂಥ ಸಂದರ್ಭದಲ್ಲಿ ಬಂದ ಈ ಕೃತಿ ಅನೇಕ ಜನರ ಮೆಚ್ಚಿಕೆಗೆ ಪಾತ್ರವಾಯಿತು; ಹಾಗೇ, ಆಕ್ಈರೋಶಕ್ಕೂ ಗುರಿಯಾಯಿತು. ಉತ್ತಮ ವಿಮರ್ಶಾ ಚಿಂತನೆಗಳಿರುವ ಕೃತಿ ಇದು.
ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು 12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...
READ MORE