‘ಖಾಸಗಿ ವಿಮರ್ಶೆ’ ಕೃತಿಯು ಕೆ. ಸತ್ಯನಾರಾಯಣ ಅವರು ಬರೆದ ವಿಮರ್ಶಾ ಬರಹಗಳ ಸಂಕಲನ. ಕೃತಿಯ ಕುರಿತು ಲೇಖಕರು ಕೆಲವೊಂದು ವಿಚಾರಗಳನ್ನು ಲೇಖಕರು ಹೀಗೆ ಹಂಚಿಕೊಂಡಿದ್ದಾರೆ : ಕೆಲವು ಲೇಖನಗಳು ಈಗಾಗಲೇ ಬೇರೆ ಬೇರೆ ಸಂಪುಟ-ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಈ ಕೃತಿಯಲ್ಲಿ 5 ಭಾಗಗಳಿದ್ದು, ಭಾಗ-1 ರಲ್ಲಿ ನನ್ನ ಬರವಣಿಗೆಯ ಸ್ವರೂಪ ಮತ್ತು ಆಕಾಂಕ್ಷೆ ಅಧ್ಯಾಯದಡಿಯಲ್ಲಿ, ಸಾಹಿತ್ಯದಲ್ಲಿ ಸಮೀಕರಣಗಳು, ಒಂದು ಸಂದರ್ಶನ, ಓದುಗನ ಏಕಾಂತ, ಬರಹಗಾರನ ತಲ್ಲಣಗಳನ್ನು ಒಳಗೊಂಡಿದೆ. ಭಾಗ-2 ರಲ್ಲಿ ಕತೆ, ಕಾದಂಬರಿ, ಕಾವ್ಯ, ಪ್ರಬಂಧ ಅಧ್ಯಯನವಿದ್ದು, ನಮ್ಮ ಕಾದಂಬರಿ ಪರಿಸರ, ಕುವೆಂಪು ಮತ್ತು ಮತಾಂತರ, ಕುವೆಂಪು - ಬಹುಶಿಸ್ತೀಯ ನೋಟ, ವಂದೇ ಮಾತರಂ ಕಾದಂಬರಿ, ಕಂಡದ್ದು ಕಾಣದ್ದು, ‘ಆವರಣ’ - ಕೃತಿ ಮತ್ತು ವಿದ್ಯಮಾನ, ಬಯಲು ಬಸಿರು, ಬಿಳಿ ಹುಲಿ, ಹಾಲೂಡಿಸುವ ಪ್ರಸಂಗ, ಲಂಕೇಶ್ ಹೇಳಿಕೊಂಡ ಕತೆಗಳು, ಇಲಿಚ್ ಮತ್ತು ಮಂತ್ರೋದಯ, ನೆಲೆಯಿಲ್ಲದ ಸಂಪಾದನೆ, ನಿಧಾನ ಶ್ರುತಿ, ಪುತಿನ ಪ್ರಬಂಧಗಳು, ಗೋಕುಲಾಷ್ಟಮಿ, ನೂರು ವರ್ಷದ ಏಕಾಂತಗಳನ್ನು ಒಳಗೊಂಡಿದೆ. ಭಾಗ-3 ವ್ಯಕ್ತಿಚಿತ್ರ , ಜೀವನ ಚರಿತ್ರೆಯಡಿ ದೊಡ್ಡ ಬದುಕಿನ ಸೂಕ್ಷ್ಮ ಚರಿತ್ರೆ, ರಾಧಾಕೃಷ್ಣರ ‘ನನ್ನ ತಂದೆ’, ವಿಜಯಶಂಕರ್ ಒಡನಾಟ, ತಾಯಿಗುಣದ ಗೆಳೆಯ, ರಿಲ್ಕೆ ಕಂಡ ಕಿರಂ, ವೈ.ಎನ್.ಕೆ. ಪ್ರಸಂಗಗಳು, ಬರೆದರೆ ಜಿ.ರಾಜಶೇಖರ್ ಹಾಗೆ ಈ ವಿಚಾರಗಳಿವೆ. ಭಾಗ-4 ಪತ್ರ ಸಾಹಿತ್ಯ ಅಧ್ಯಾಯದಡಿ, ಜಿ.ರಾಜಶೇಖರ್ ಪತ್ರಗಳು, ಗಿರೀಶ್ ವಾಘ್ ಪತ್ರಗಳು, ಉತ್ತರಿಸಲಾಗದ ಪತ್ರ, ಸಂಪಾದಕರ ಅಪರೂಪದ ಪತ್ರ, ಲಂಕೇಶ್ ಪತ್ರಗಳು ಇಲ್ಲಿವೆ. ಭಾಗ -5 ವೈವಿಧ್ಯ ಅಧ್ಯಾಯದಡಿ, ಗಾಂಧಿ - ಓದುಗನಾಗಿ, ಪುಸ್ತಕ ಸಮೀಕ್ಷೆ - ಲೋಹಿಯಾ, ಪತ್ರಿಕೆಗಳು ಮತ್ತು ಸಾಹಿತ್ಯ, ಜಿ.ಎನ್.ರಂಗನಾಥರಾವ್, ಲಕ್ಷ್ಮಣ ಕೂಡಸೆ, ನಮ್ಮ ಕನಸುಗಳಲ್ಲಿ ಕನ್ನಡ, ಕನ್ನಡದ ನಿನ್ನೆಗಳು, ನಮ್ಮ ಆಧ್ಯಾತ್ಮಿಕತೆ, ಜೆ.ಕೆ.ಚಿಂತನೆ, ನಮ್ಮವರಂತೆಯೇ ಕಾಣುವ ನೈಪಾಲ್, ಇದೊಂದು ಜೀವನ ಶೈಲಿಯ ವಾಙ್ಮಯ, ಕ್ರಿಕೆಟ್ ಅಲ್ಲದ ಕ್ರಿಕೆಟ್, ಗೂಡಿಗೆ ಸೇರದ ಹಕ್ಕಿಗಳು, ಪಂಪಾಯಾತ್ರೆ ಬರಹಗಳು ಒಳಗೊಂಡಿವೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE