ಸಾಹಿತಿ ವೈ.ಕೆ. ಸಂಧ್ಯಾ ಶರ್ಮಾ ಅವರ, ‘ರಂಗಾಂತರಂಗ’ ಕೃತಿಯು ನಾಟಕ ವಿಮರ್ಶೆಯಾಗಿದೆ. ಈ ಕೃತಿಗೆ ಕವಿ ಹೆಚ್.ಎಸ್. ವೆಂಕಟೇಶ ಮೂರ್ತಿಯವರು ಮುನ್ನುಡಿ ಬರೆದಿದ್ದಾರೆ. ರಂಗತಜ್ಞ ಕೆ.ವಿ ಶ್ರೀನಿವಾಸ ಪ್ರಭು ಅವರು ಶುಭ ಹಾರೈಕೆಯ ನುಡಿಗಳನ್ನು ಬರೆದಿದ್ದು, ‘70-80ರ ದಶಕ. ರಂಗಭೂಮಿ ಚಟುವಟಿಕೆಗಳು ಹುರಿಗಟ್ಟಿಕೊಂಡು ನಡೆಯುತ್ತಿದ್ದ ದಿನಗಳವು. ಆಗ ಪತ್ರಿಕೆಗಳಲ್ಲಿ ಬರುತ್ತಿದ್ದ ರಂಗಪ್ರಯೋಗ ವಿಮರ್ಶೆಗಳಿಗೆ ಒಂದು ವಿಶಿಷ್ಟ ಸ್ಥಾನವಿತ್ತು. ನಂತರದ ದಿನಗಳಲ್ಲಿ ಅನೇಕ ಕಾರಣಗಳಿಂದಾಗಿ ರಂಗವಿಮರ್ಶೆ ಪ್ರಮುಖ್ಯತೆಯನ್ನು ಕಳೆದುಕೊಂಡುಬಿಟ್ಟಿತ್ತು. ಮತ್ತೆ ಈ ರಂಗವಿಮರ್ಶೆಗೆ ಒಂದು ಮಹತ್ವದ ಸ್ಥಾನ ಗಳಿಸಿಕೊಟ್ಟವರಲ್ಲಿ ಸಂಧ್ಯಾಶರ್ಮಾ ಅವರು ಪ್ರಮುಖರು. ಅವರ ವಿಮರ್ಶೆಗಳಲ್ಲಿ ನಮಗೆ ಕಂಡುಬರುವ ಖಚಿತತೆ-ಸಮತೋಲನ ಹಾಗೂ ಸರ್ವಾಂಗೀಣ ಅವಲೋಕನಗಳ ಹಿಂದೆ ಅಡಗಿರುವುದು ಅವರ ವ್ಯಾಪಕ ಅನುಭವ ಮೂಲದ್ರವ್ಯ. ಒಂದು ರಂಗಪ್ರಯೋಗದ ವಿಮರ್ಶೆ ಅಂದರೆ ಅದು ಒಂದಷ್ಟು ಅನಿಸಿಕೆಗಳು ಅಥವಾ ಹೇಳಿಕೆಗಳ ಬರಹವಲ್ಲ. ಸಾಹಿತ್ಯ ಕೃತಿಯಾಗಿ ಅದರ ಸತ್ವ-ಸಾಮರ್ಥ್ಯಗಳನ್ನು ಅನಾವರಣ ಮಾಡುತ್ತಲೆ ಅದು ರಂಗದ ಮೇಲೆ ರೂಪಾಂತರಗೊಳ್ಳುವ ಪ್ರಕ್ರಿಯೆಯ ಎಲ್ಲ ಮಜಲುಗಳನ್ನು ಜತನದಿಂದ ಪರಿಭಾವಿಸುತ್ತಾ ವಿಮರ್ಶೆಗೆ ತೊಡಗಬೇಕಾಗುತ್ತದೆ. ಸಂಧ್ಯಾ ಅವರ ವಿಮರ್ಶೆಗಳಲ್ಲಿ ಈ ಬಗೆಯ ಒಂದು ಕಟ್ಟೆಚ್ಚರವಿದೆ, ಹದತಪ್ಪದ ಸಮತೋಲನವಿದೆ. ಮೆಚ್ಚಿ ಪ್ರೋತ್ಸಾಹಿಸುವ ಸಹೃದತೆಯಿದೆ. ಅಂತೆಯೇ ಎಚ್ಚರಿಸಿ ತಿದ್ದುವ ಜಾಣ್ಮೆಯೂ ಇದೆ. ಇವೆಲ್ಲದಕ್ಕೂ ಹೆಚ್ಚಾಗಿ ಅತ್ಯಂತ ವಸ್ತುನಿಷ್ಠನೆಲೆಯಲ್ಲಿ ನಿಂತು ವಿಮರ್ಶೆಗೆ ಒಂದು ತೂಕವನ್ನೂ ಹದವನ್ನೂ ತಂದುಕೊಡುವ ಕಲೆಗಾರಿಕೆ ಇದೆ ಎಂಬುದು ನನ್ನ ನಿಲುವು ಎಂದಿದ್ದಾರೆ.
ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...
READ MORE