'ಸಾಹಿತ್ಯ ಸಂಸ್ಕೃತಿ ಮತ್ತು ಪರಿಸರ’ ಕೃತಿಯು ರಾಜಶೇಖರ ಮಠಪತಿ ಅವರ ವಿಮರ್ಶಾಸಂಕಲನವಾಗಿದೆ. ರಾಜಶೇಖರ ಮಠಪತಿಯವರ ಈ ಕೃತಿಯ ಬರಹಗಳು ಇಡೀ ಸಮಾಜದ ಸ್ವಾಸ್ಥ್ಯದ ಕಾಳಜಿಯನ್ನೇ ವ್ಯಕ್ತಪಡಿಸುತ್ತವೆ. ಸಂಕಲನದ ಬರಹಗಳೆಲ್ಲವೂ ಬೇರೆಬೇರೆ ದೇಶಬಾಂಧವ ಚಿಂತಕರ ಬರಹಗಳಾಗಿದ್ದರೂ ಅವೆಲ್ಲವೂ ನಮ್ಮ ಸಮಾಜದ ಕುರಿತಾದ ಚಿಂತನೆಗಳೆನಿಸುವಷ್ಟು ಆತ್ಮೀಯ ವಾಗುತ್ತದೆ ಹಾಗೂ ಚಿಂತನೆಗೆ ದೂಡುತ್ತವೆ. ಇಡೀ ಭೂಮಂಡಲದ ಸಾಮಾಜಿಕ ಪಲ್ಲಟಗಳನ್ನು ಮುಂದಿಡುವ ಕೃತಿ ಪ್ರಪಂಚದ ಮೂಲೆ-ಮೂಲೆಗಳ ಸಮಸ್ಯೆಗಳನ್ನು ನಾವು ನಮ್ಮ ಸಮಸ್ಯೆಗಳು ಎಂದು ಭಾವಿಸುವಂತೆ ಮಾಡುತ್ತದೆ. ಸಾಮಾಜಿಕ ಕಾಳಜಿಗೆ ಇರುವ ವ್ಯಾಪ್ತಿಯ ಮಿತಿಯನ್ನು ಒಡೆಯುವಲ್ಲಿ ಈ ಕೃತಿ ಯಶ ಕಂಡಿದೆ. ಇಲ್ಲಿನ ಎಲ್ಲ ಬರಹಗಳು ಮಾನವನನ್ನೂ ಸೇರಿದಂತೆ ಇತರೆ ಜೀವಸಂಕುಲ ಹಂತಹಂತವಾಗಿ ಸಾಗುತ್ತಿರುವ ಹಾದಿಯನ್ನೂ, ಅದರಿಂದ ಮುಂದೆ ಎದುರಾಗಬಹುದಾದ ಪರಿಣಾಮಗಳನ್ನೂ ನಮ್ಮ ಮುಂದೆ ತೆರೆದಿಡುತ್ತಾ ಎಚ್ಚರಿಕೆಯನ್ನು ನೀಡುತ್ತವೆ.
ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...
READ MORE(ಹೊಸತು, ಡಿಸೆಂಬರ್ 2012, ಪುಸ್ತಕದ ಪರಿಚಯ)
ಸಮಾಜ ಕುರಿತಾದ ವಿಮರ್ಶೆಯೊಳಗೆ ಸಾಹಿತ್ಯ- ಸಂಸ್ಕೃತಿ ಮತ್ತು ಪರಿಸರಗಳೂ ಸೇರುತ್ತವೆ. ರಾಜಶೇಖರ ಮಠಪತಿಯವರ ಈ ಕೃತಿಯ ಬರಹಗಳು ಇಡೀ ಸಮಾಜದ ಸ್ವಾಸ್ಥ್ಯದ ಕಾಳಜಿಯನ್ನೇ ವ್ಯಕ್ತಪಡಿಸುತ್ತವೆ. ಸಂಕಲನದ ಬರಹಗಳೆಲ್ಲವೂ ಬೇರೆಬೇರೆ ದೇಶಬಾಂಧವ ಚಿಂತಕರ ಬರಹಗಳಾಗಿದ್ದರೂ ಅವೆಲ್ಲವೂ ನಮ್ಮ ಸಮಾಜದ ಕುರಿತಾದ ಚಿಂತನೆಗಳೆನಿಸುವಷ್ಟು ಆತ್ಮೀಯ ವಾಗುತ್ತದೆ ಹಾಗೂ ಚಿಂತನೆಗೆ ದೂಡುತ್ತವೆ. ಇಡೀ ಭೂಮಂಡಲದ ಸಾಮಾಜಿಕ ಪಲ್ಲಟಗಳನ್ನು ಮುಂದಿಡುವ ಕೃತಿ ಪ್ರಪಂಚದ ಮೂಲೆ-ಮೂಲೆಗಳ ಸಮಸ್ಯೆಗಳನ್ನು ನಾವು ನಮ್ಮ ಸಮಸ್ಯೆಗಳು ಎಂದು ಭಾವಿಸುವಂತೆ ಮಾಡುತ್ತದೆ. ಸಾಮಾಜಿಕ ಕಾಳಜಿಗೆ ಇರುವ ವ್ಯಾಪ್ತಿಯ ಮಿತಿಯನ್ನು ಒಡೆಯುವಲ್ಲಿ ಈ ಕೃತಿ ಯಶ ಕಂಡಿದೆ. ಇಲ್ಲಿನ ಎಲ್ಲ ಬರಹಗಳು ಮಾನವನನ್ನೂ ಸೇರಿದಂತೆ ಇತರೆ ಜೀವಸಂಕುಲ ಹಂತಹಂತವಾಗಿ ಸಾಗುತ್ತಿರುವ ಹಾದಿ ಯನ್ನೂ, ಅದರಿಂದ ಮುಂದೆ ಎದುರಾಗಬಹುದಾದ ಪರಿಣಾಮಗಳನ್ನೂ ನಮ್ಮ ಮುಂದೆ ತೆರೆದಿಡುತ್ತಾ ಎಚ್ಚರಿಕೆಯನ್ನು ನೀಡುತ್ತವೆ. ಮನುಷ್ಯ ಸಂಪೂರ್ಣ ಸ್ವತಂತ್ರನೇನೂ ಅಲ್ಲ. ಅವನ್ನು ಅವಲಂಬಿಸಿರುವ ಜೀವಸಂಕುಲದ ಸರಪಳಿ ಅವನ ಅಂಕೆಗೂ ಸಿಗುವುದಿಲ್ಲ. ಇದನ್ನು ಅರಿತಾಗ ಮಾತ್ರ ಮನುಷ್ಯ ಮನುಷ್ಯನಾಗಿ ಉಳಿಯಬಲ್ಲ. ಅವರು ನಂಬಿರುವ ಜೀವಸಂಕುಲವೂ ಉಳಿಯಬಲ್ಲದು ಎಂಬುದನ್ನು ಕೃತಿಯು ಹಂತಹಂತವಾಗಿ ವಿವರಿಸುತ್ತಾ ಸಾಗುತ್ತದೆ.