‘ಒಳದನಿ’ ಲೇಖಕ ಆರ್.ವಿ. ಭಂಡಾರಿ ಅವರ ವಿಮರ್ಶಾ ಸಂಕಲನ. ಈ ಕೃತಿಯ ಕುರಿತು ಬರೆಯುತ್ತಾ ಒಳದನಿ ಎಂಬ ಈ ವಿಮರ್ಶಾ ಸಂಕಲನದಲ್ಲಿ 1989ರಿಂದ 2003 ರ ಒಳಗಿನ ನನ್ನ ಕೆಲವು ಚಿಕ್ಕದೊಡ್ಡ ಎಂಬಂಥ ಮೂವತ್ತೊಂದು ಬರಹಗಳು ಒಳಗೊಂಡಿವೆ. ಎಲ್ಲ ಬರಹಗಳೂ ನಮ್ಮ ಜಿಲ್ಲೆಯ ಲೇಖಕ-ಲೇಖಕಿಯರ ಸಾಹಿತ್ಯ ಕೃತಿಗಳಿಗೇ ಮೀಸಲಾಗಿವೆ. ಆದ್ದರಿಂದ ಇದು ಒಳ ದನಿ.. ನಮ್ಮ ಜಿಲ್ಲೆ (ಉತ್ತರ ಕನ್ನಡ ಜಿಲ್ಲೆ) ಮುಚ್ಚಿಕೊಂಡ ಜಿಲ್ಲೆ ಎಂಬ ಮಾತಿದೆ. ಅಂದರೆ ಹೊರಗಿನವರಿಗೆ ಈ ಜಿಲ್ಲೆ ನಿಷ್ಕ್ರಿಯ ಎಂಬಂತೆ ತೋರುತ್ತದೆ. ಆದರೆ ಅದು ಹಾಗಿಲ್ಲ. ಒಳದನಿ ಇದ್ದೇ ಇದೆ ಎಂದಿದ್ದಾರೆ ಲೇಖಕ ಆರ್.ವಿ. ಭಂಡಾರಿ. ಜೊತೆಗೆ ಇಲ್ಲಿನ ಹೆಚ್ಚಿನ ಬರಹಗಳು ನಮ್ಮ ಜಿಲ್ಲೆಯ ಯುವ ಲೇಖಕ ಲೇಖಕಿಯರಿಗೇ ಸಂಬಂಧಿಸಿವೆ ಎಂದು ತಿಳಿಸಿದ್ದಾರೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...
READ MORE