ವರಕವಿ ದ. ರಾ ಬೇಂದ್ರೆಯವರ ಕಾವ್ಯ ಹಾಗೂ ವ್ಯಕ್ತಿತ್ವವನ್ನು ವಿಮರ್ಶೆಗೆ ಒಳಪಡಿಸಿದ ಬರಹಗಳನ್ನು ಸಂಕಲಿಸಿದ ಕವಿ ಹಾಗೂ ವಿಮರ್ಶಕ ವಿ.ಕೃ. ಗೋಕಾಕ್ ಅವರ ಕೃತಿ-ಬೇಂದ್ರೆಯವರ ಕಾವ್ಯ ಮತ್ತ ವ್ಯಕ್ತಿತ್ವ. ಬೇಂದ್ರೆ ಅವರೊಂದಿಗೆ ಬಹಳ ಹತ್ತಿರದ ಒಡನಾಟವಿದ್ದ ಗೋಕಾಕರು, ತಮ್ಮ ವಿದ್ವತ್ವ್ ಪ್ರತಿಭೆಯ ಮೂಲಕ ಬೇಂದ್ರೆ ಅವರ ಕಾವ್ಯವನ್ನು ವಿಮರ್ಶಿಸಿದ್ದು ಮಾತ್ರವಲ್ಲ; ಬೇಂದ್ರೆ ಅವರ ವ್ಯಕ್ತಿತ್ವವು ಕಾವ್ಯ ರಚನೆಗೆ ನೀಡಿದ ಬಗೆಯನ್ನು ವಿಶ್ಲೇಷಿಸಿದ್ದಾರೆ. ಆ ಮೂಲಕ ಬೇಂದ್ರೆ ಅವರ ಕಾವ್ಯ ಶಕ್ತಿಯನ್ನು, ಗ್ರಹಿಕೆಯ ಆಳವನ್ನು, ಬೇಂದ್ರೆ ಅವರ ಪ್ರಯೋಗಶೀಲ ಕಾವ್ಯ ರಚನೆಯ ವೈವಿಧ್ಯತೆಗಳನ್ನು ತೋರಿದ್ದಾರೆ.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MORE