ಕಡಾಲಾಯಿತು ಕನ್ನಡ

Author : ರಾಜಶೇಖರ ಮಠಪತಿ (ರಾಗಂ)

Pages 176

₹ 190.00




Year of Publication: 2021
Published by: ಸಿರಿವರ ಪ್ರಕಾಶನ
Address: ನಂ.ಎಂ37/ಬಿ, 8ನೇ ಕ್ರಾಸ್, ಲಕ್ಷ್ಮೀನಾರಾಯಣಪುರ, ಬೆಂಗಳೂರು- 560021
Phone: 9844109706

Synopsys

ಲೇಖಕ ರಾಗಂ ಅವರ ವಿಮರ್ಶಾತ್ಮಕ ಬರಹಗಳ ಸಂಗ್ರಹ ‘ಕಡಲಾಯಿತು ಕನ್ನಡ’. ಈ ಕೃತಿಯ ಬೆನ್ನುಡಿಯಲ್ಲಿ ಜಿ.ಎಸ್. ಅಮೂರ, ಕೆ.ಎಸ್.ಭಗವಾನ್, ಚಂದ್ರಕಾಂತ್ ಕುಸನೂರ, ಆರ್.ಪಿ.ವೆಂಕಟೇಶಮೂತಿ ಅವರ ಮಾತುಗಳನ್ನು ಚಿಕ್ಕ ಹಾಗೂ ಚೊಕ್ಕವಾಗಿ ಹಾಕಲಾಗಿದೆ.

ಕೃತಿಯಲ್ಲಿರುವ ಲೇಖಕರ ಮಾತುಗಳಲ್ಲಿ, ಕಳೆದ ನಾಲ್ಕು ದಶಕಗಳ ಸಾಹಿತ್ಯ ಹಾಗೂ ಸಂಸ್ಕೃತಿಯೊಂದಿಗಿನ ಮುಖಾಮುಖಿಯ ಫಲಶೃತಿ ಪ್ರಸ್ತುತ ಈ ಲೇಖನಗಳ ಗುಚ್ಚ. ಆದರೆ ಯಾರ ಕೈಗಿಡುವುದು? ಸಧ್ಯ ನನ್ನ ಮುಂದಿರುವ ಅತಿ ದೊಡ್ಡ ಪ್ರಶ್ನೆ. ಹಾಗೆ ನೋಡಿದರೆ ಜಾಗತಿಕದಿಂದ ಸ್ಥಳೀಯ ಮಟ್ಟದವರೆಗೂ ಕರೋನೋತ್ತರದ ಎಲ್ಲ ಸೃಜನಶೀಲರ ಮುಂದಿರುವ ದೊಡ್ಡ ಬಿಕ್ಕಟ್ಟೇ ಇದು. ಇಡೀ ಮನುಕುಲವನ್ನೇ ನಿಟ್ಟುಸಿರೂ ಬಿಡದಂತೆ ಅಟ್ಟಾಡಿಸಿ, ವಾಸ್ತವ ಸಮಾಜವನ್ನು ಕೇವಲ ಸತ್ತವರು ಮತ್ತು ಸತ್ತಂತಿರುವವರು ಎಂದು ವಿಭಜಿಸಿದ, ಈ ಮೃತ್ಯುಮಂಡಲದಲ್ಲಿ ಕುಳಿತು ಯಾರಿಗಾಗಿ ಬರೆಯುವುದು? ಯಾವ ಪುರುಷಾರ್ಥಕ್ಕಾಗಿ ಬರೆಯುವುದು? ಯಾವ ನೆಮ್ಮದಿ-ನಂಬಿಕೆಯ ಹಾಡು ಹಾಡುವುದು? ಈ ಬರಹಗಳಿಂದ ಯಾವ ಭರವಸೆ ಹುಟ್ಟಿಸಿಕೊಳ್ಳುವುದು? ಕಣ್ಣೀರೂ ಒರೆಸಲು ಸೋತು “RIP'ಎಂಬ ಬಾಡಿಗೆ ಭಾಷೆಗೆ ಬಲಿಯಾದ ಈ ಕಾಲಘಟ್ಟದಲ್ಲಿ ನಮ್ಮ ಕಾವ್ಯ ಖಡ್ಗವಾಗುವುದೆಂತು? ಹೊದಿಕೆಯ ಗುಡಿಸಲಾಗದಿದ್ದರೂ ಚಿಂತೆಯಿಲ್ಲ, ಸುಡುವ ಕಟ್ಟಿಗೆಯಾಗಿಯಾದರೂ ನಮ್ಮ ಸಮಾಜೋ-ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ವಿಶ್ಲೇಷಣೆಗಳು ನಮ್ಮ ಹೆಣಗಳಿಗೆ ಸದ್ಧತಿಯ ಕಾಣಿಸಲಿ ಎಂಬ ಕನಿಷ್ಠ ಆಶಯವನ್ನೂ ಪೂರೈಸದ, ನಾಟಕೀಯ ಬೌದ್ಧಿಕ ಕಾಲ್ತುಳಿತಕ್ಕೆ ಒಳಗಾಗಿದ್ದೇವೆ ನಾವು, ಕುಟುಂಬ, ಸಮಾಜ ಹಾಗೂ ಸಮಷ್ಠಿಗಳ ಒಟ್ಟು ಹಿತವನ್ನೇ ಹಿಂಡಿ-ಹೀರಿ ಸಿಪ್ಪೆಯಾಗಿಸಿದ ಯಂತನಕ್ಷರುಣೆಯ ರಾಜಕೀಯ ಕುತಂತ್ರಕ್ಕೆ ಬಲಿಯಾಗಿದ್ದೇವೆ ನಾವು. ನಮ್ಮ ನೆಮ್ಮದಿಯ ನಾಳೆಗೆಂದು ನಾವೇ ಶೋಧಿಸಿ, ಸ್ಥಾಪಿಸಿ, ಪೋಷಿಸಿದ ವಿಜ್ಞಾನವೆಂಬ ವಿಷದ ಅನ್ನವನುಂಡು ವಿಕಾರಗೊಂಡಿದ್ದೇವೆ ನಾವು, ಸಾಧನೆಯೆಂಬ ಸೂಡು ಹುಲ್ಲಿಗೆ ಕತ್ತೆಗಳಂತೆ ಹಂಬಲಿಸಿ ತುಂಬಾ ಮುಂದೆ ಬಂದಿದ್ದೇವೆ ನಾವು!? ತುಂಬಾ ತುಂಬಾ ದೂರ ಬಂದಿದ್ದೇವೆ. ಪ್ರಗತಿಯ ಬಾವುಟ ನೆಟ್ಟಿದ್ದೇವೆ. ಎಷ್ಟು? ಎಂಬ ಪ್ರಶ್ನೆಗೆ ನನ್ನದೇ ಕವಿತೆಯ ಸಾಲೊಂದು ನೆನಪಾಗುತ್ತದೆ. “ಬಿಟ್ಟ ದಡಕೆ ನೆನಪುಗಳಿಲ್ಲ. ಮುಟ್ಟುವ ದಡದಲಿ ಬದುಕೇ ಇಲ್ಲ". ಈ ನನ್ನ ಚಿಂತನೆ ಹೊಸತೂ ಅಲ್ಲ. ಮೊದಲೂ ಅಲ್ಲ. ಕಾಲಕಾಲದ ಗ್ಲಾನಿಗೆ ಅರಿವಿನ ದೀಪಗಳನ್ನು ಅಂಗೈಲಿರಿಸಿಕೊಂಡು ಕಾತುರದಿಂದ ಕಾಯುತ್ತ ಕುಳಿತ ಜೀವ ಪ್ರೀತಿಯ ಜನರ ಪರಂಪರೆ ಇತಿಹಾಸದಿಂದ ವರ್ತಮಾನದವರೆಗೆ ಅಖಂಡವಾಗಿದೆ. ಪ್ರಸ್ತುತ 'ಕಡಲಾಯಿತು ಕನ್ನಡ'ದಲ್ಲಿ ಇರುವವರೂ ಕೂಡ ಅವರೆ. ಇಲ್ಲಿಯ ಕನಕದಾಸ, ರಾಮ್‌ಪ್ರಸಾದ ಬಿಸ್ಮಿಲ್ಲಾ, ಟ್ಯಾಗೋರ, ಕುವೆಂಪು, ಕೀರಂ, ಕೃಷಿ, ಜೆ.ಎಸ್.ಅಮೂರ, ಎಂ.ಎನ್.ವ್ಯಾಸರಾವ್, ಶೂದ್ರ ಶ್ರೀನಿವಾಸ, ಜಿ.ಬಿ.ಸಜ್ಜನ, ಲಂಕೇಶ, ಗೌರಿ, ಕಿಕ್ಕೇರಿ ನಾರಾಯಣ, ಗಿರಡ್ಡಿ, ಬೇಲೂರು ಕೃಷ್ಣಮೂರ್ತಿ, ಕುಸನೂರ, ಮತ್ತು ಅಭ್ಯಾಸ ಮೇಲಿನಮನ ಇವರೆಲ್ಲ ಅದೇ ಸಾಧನೆಯ, ಸರಳತೆಯ, ಮೃದು ಮಧುರ ನೆನಪಿನ ಪುಟಗಳು. ನನ್ನ ಓದಿನ ವ್ಯಾಪ್ತಿಗೆ ದಕ್ಕಿದಂತೆ ಇವರಾರೂ ಹುಟ್ಟು ಶ್ರೀಮಂತರಲ್ಲ, ಹುಟ್ಟಿ ಶ್ರೀಮಂತರು, ಪೂರ್ಣ ಬದುಕಿನ ಧನ್ಯತೆಯನ್ನು ದಕ್ಕಿಸಿಕೊಂಡವರು. ಒಂದು ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಅನನ್ಯತೆಗೆ ಅಲ್ಲಿಯ ಕಟ್ಟಡ, ಭೌತಿಕ ಸಾಧನೆಗಳಷ್ಟೇ ಸಾಕ್ಷಿಯಲ್ಲ, ಆಗಲೂ ಬೇಕಿಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳುವುದಾದರೆ ಈ ಮಣ್ಯಾತ್ಮರ ಬೆಳಕು ನಮಗೆ ದಕ್ಕೀತು.

ಕೃತಿಯ ಪರಿವಿಡಿಯಲ್ಲಿ ಕೊನೆಯಿರದ ಪಯಣ: ರಾಮ್ ಪ್ರಸಾದ ಬಿಸ್ಮಿಲ್ಲಾ, ನಮ್ಮದಲ್ಲದ ದಾರಿಯನ್ನು ಎಷ್ಟು ತುಳಿದರೇನು?, ನೀನ್ನ ಸಂಗವೇ ಪರಮ ಮಂಗಳ:ಕುವೆಂಪು, ತುಮುಲಗಳಿಗೆ ತುಟಿಯಾಗಿ:ಕೀರಂ, ಕೈಫಿಯತ್ ಎಕ್ಸ್ ಪ್ರೆಸ್, ರುಂಬೆ ಹೂವಿಟ್ಟು ಶರಣೆಂದಿರುವೆ, ಗಿರಿಜವ್ವನ ಮಗನೊಂದಿಗೆ, ಸುಳಿಗಳಿಂದ ಸರಳತೆ ಎಡೆಗೆ, ಅವಳು ಗುಪ್ತಗಾಮಿನಿ: ಚಂಪಾ, ಹೆಣ್ಣು ನಾನು ಭೂಮಿ ತೂಕದವಳು ಸೇರಿದಂತೆ 26 ಶೀರ್ಷಿಕೆಗಳ ಬರಹಗಳಿವೆ.

About the Author

ರಾಜಶೇಖರ ಮಠಪತಿ (ರಾಗಂ)

ಸಾಹಿತಿ, ಚಿಂತಕ, ಕನ್ನಡ ಸಾಹಿತ್ಯ ಆಕಾಡೆಮಿ ಸದಸ್ಯರಾದ  ರಾಜಶೇಖರ ಮಠಪತಿ (ರಾಗಂ) ಅವರು ಹುಟ್ಟಿದ್ದು ಬೆಳಗಾಂವ ಜಿಲ್ಲೆಯ ತೆಲಸಂಗದಲ್ಲಿ. ಕರ್ನಾಟಕದ ಗಡಿಯ ಊರಾದ ಚಡಚಣದಲ್ಲಿ ಪ್ರಾಥಮಿಕದಿಂದ ಪದವಿಪೂರ್ವದ ಶಿಕ್ಷಣ, ನಂತರ ಬಿಜಾಪೂರ ಮತ್ತು ಸೊಲ್ಲಾಪುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ, ಕ.ವಿ.ವಿ ಧಾರವಾಡದಿಂದ ಆಂಗ್ಲ ಸಾಹಿತಿ, ಸಿನಿಮಾ ನಿರ್ದೇಶಕ,ಪತ್ರಕರ್ತ, ಕೆ.ಎ.ಅಬ್ಬಾಸರನ್ನು ಕುರಿತು ಪಿ.ಹೆಚ್.ಡಿ - ಹೀಗೆ ಶೈಕ್ಷಣಿಕ ಬದುಕಿನ ಹಲವು ಹಂತಗಳನ್ನು ಗಳಿಸಿದ್ದಾರೆ. ಇದುವರೆಗೆ ಅವರು ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಕೃತಿಗಳ ಸಂಖ್ಯೆ ಅರವತ್ತು ಅಂಕಿಯನ್ನು ದಾಟುತ್ತದೆ. ಕಾವ್ಯ, ಕತೆ, ನಾಟಕ, ಪ್ರಬಂಧ, ಅಂಕಣ, ಸಂಶೋಧನೆ, ...

READ MORE

Related Books