ಟೀಕಿಸು ಭಾಷ್ಯಕಾರ ಆಗಬೇಡ - ಎನ್ನುವ ಅರ್ಥ ಕೊಡುವಂತಿರುವ ಶೀರ್ಷಿಕೆಯಲ್ಲಿ ಬರೆದಿರುವ ಈ ಕೊಂಕಣಿ ಭಾಷೆಯ ಪುಸ್ತಕವು 'ತಪಸ್ವಿನಿ' ಕಾದಂಬರಿ, 'ಮ್ಹಜಿ ಬಾ ಖಂಯ್ ಗೆಲಿ' ಕಥೆ, 'ರೈಲ್ವೆ ಪ್ಲಾಟಫಾರ್ಮ್' ನಾಟಕ, 'ಹಿಬಿಸ್ಕಸ್' ಕಥೆ ಗಳ ಮೇಲಿನ ವಿಮರ್ಶೆಯನ್ನು ಒಳಗೊಂಡಿದೆ. ಕೃತಿಯ ಲೇಖಕರು-ಅರವಿಂದ ಚಂದ್ರಕಾಂತ ಶ್ಯಾನಭಾಗ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಸ್ಕೃತ ಸಾಹಿತ್ಯದಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಎಂ.ಎ. ಪಡೆದಿದ್ದು, ಪಿಎಚ್ ಡಿ ಪದವೀಧರರು- ಅರವಿಂದ ಚಂದ್ರಕಾಂತ ಶ್ಯಾನಭಾಗ, ಗಾಂಧಿ ಅಧ್ಯಯನ ಮತ್ತು ಜೈನಶಾಸ್ತ್ರ ಅಧ್ಯಯನ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಇವರು ಹವ್ಯಾಸಿ ಬರಹಗಾರರು. ಈವರೆಗೆ ಕನ್ನಡ ಮತ್ತು ಕೊಂಕಣಿಯಲ್ಲಿ 9 ಪುಸ್ತಕಗಳನ್ನು ಪ್ರಕಟಿಸಿದ್ದು, 300 ಕ್ಕೂ ಹೆಚ್ಚು ಲೇಖನಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ವಿಜಯಪುರ, ಧಾರವಾಡ, ಮಂಗಳೂರು ಮತ್ತು ಕಾರವಾರ ಆಕಾಶವಾಣಿ ಕೇಂದ್ರಗಳಿಂದ ಇವರ ಚಿಂತನ, ಭಾಷಣ ಮತ್ತು ಸಂಸ್ಕ್ರತ ಪಾಠ ಮುಂತಾದ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಕರಾವಳಿ ಮುಂಜಾವು ಮತ್ತು ಕನ್ನಡ ಜನಾಂತರಂಗ ದಿನಪತ್ರಿಕೆಗಳಲ್ಲಿ ...
READ MORE