ಸಾಮಾಜಿಕ ವಾಸ್ತವ

Author : ಅಮರೇಶ ನುಗಡೋಣಿ

Pages 124

₹ 80.00




Year of Publication: 2016
Published by: ವಿಜಯಕಲ್ಯಾಣ ಪ್ರಕಾಶನ
Address: 8ನೇ ವಾರ್ಡ್, ಕೊಂಡನಯಕನಹಳ್ಳಿ, ಹೊಸಪೇಟೆ, ಬಳ್ಳಾರಿ ಜಿಲ್ಲೆ-583239
Phone: 9880746551

Synopsys

ನಿತ್ಯ ಪರಿವರ್ತನಶೀಲ ಸಮಾಜದಲ್ಲಿ ವಾಸ್ತವವನ್ನು ಗೃಹಿಸುವ ವಿಧಾನ ಯಾವುದು? ವಾಸ್ತವ ಒಂದೇ ಸ್ಚರೂಪದಲ್ಲಿ ಇರುವುದಿಲ್ಲ, ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಸಮಾಜದಲ್ಲಿ ನಡೆದ ಯಾವುದೇ ಒಂದು ಘಟನೆಯನ್ನು ಆ ವ್ಯಕ್ತಿಯು ತನ್ನ ಹಿನ್ನೆಲೆಯಿಂದ ಗ್ರಹಿಸಿಕೊಂಡು ಇದೇ ವಾಸ್ತವ ಎಂದು ಭಾವಿಸುತ್ತಾನೆ.ಈ ಗ್ರಹಿಕೆ ಮುಖ್ಯವಾಗಿ ವ್ಯಕ್ತಿಯು ಹುಟ್ಟಿದ ಜಾತಿ, ವರ್ಗ, ಪರಿಸರ ಮತ್ತು ಸಿದ್ಧಾಂತಗಳ ಪ್ರಭಾವಗೊಂಡಿರುತ್ತದೆ. ಹೀಗೆ ಹಲವು ಪ್ರಮುಖ ವಿಷಯಗಳ ಬಗ್ಗೆ ಲೇಖಕ ಅಮರೇಶ ನುಗಡೋಣಿ ಅವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Related Books