ಪ್ರಸಿದ್ಧ ಲೇಖಕರಾದ ಡಾ. ಹಾ ಮಾ ನಾಯಕ ಅವರು ತಮ್ಮ ಸೋದರ ಸಾಹಿತಿಗಳ ಪುಸ್ತಕಗಳಿಗೆ ಬರೆದ ಮುನ್ನುಡಿಗಳ ಮೂರನೆಯ ಸಂಕಲನವಾಗಿ ’ಸನ್ನುಡಿ’ ಕೃತಿ ಪ್ರಕಟಗೊಂಡಿದೆ.
ಈ ಪುಸ್ತಕದಲ್ಲಿಎಂ.ಆರ್.ಶ್ರೀನಿವಾಸ ಮೂರ್ತಿ, ತ.ಸು.ಶಾಮರಾಮ, ಪಾ.ವೆಂ.ಆಚಾರ್ಯ. ಜಿ.ಎಂ.ಹೆಗಡೆ, ಎಂ.ರಾಮಚಂದ್ರ, ಹೊ.ಶ್ರೀನಿವಾಸಯ್ಯ, ಕಮಲಾ ಮೂರ್ತಿ ಮೊದಲಾದ ಹತ್ತೊಂಬತ್ತು ಹಿರಿಕಿರಿಯ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳು ಸಂಕಲನಗೊಂಡಿವೆ. ಮುನ್ನುಡಿಗಳು ಏನುಬೇಕಾದರೂ ಆಗಬಹುದು, ಆದರೆ ಸನ್ನುಡಿಗಳಾಗದಿರಲು ಸಾಧ್ಯವಿಲ್ಲ. ಎಂದು ಜಾ.ನಾಯಕರು ಹೇಳುತ್ತಾರೆ. ನಮ್ಮ ಸಾಹಿತ್ಯ ಸಂಪ್ರದಾಯದ ಒಂದು ಭಾಗವೇ ಆಗಿರುವ ಮುನ್ನುಡಿಗಳು, ಆಯಾ ಪುಸ್ತಕಗಳಿಗೆ ಪ್ರವೇಶಗಳೂ ಆಗಿರುತ್ತವೆ. ಈ ಮುನ್ನಡಿಗಳನ್ನು ಓದಿದ ಮೇಲೆ ಮೂಲ ಪುಸ್ತಕಗಳನ್ನು ಓದಬೇಕೆಂಬ ಅಪೇಕ್ಷೆ ಓದುಗರಲ್ಲಿ ಮೂಡಿದರೆ ಆಶ್ಚರ್ಯವಿಲ್ಲ.
ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...
READ MORE