ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಲೇಖನಗಳ ಹತ್ತನೆಯ ಸಂಕಲನ ‘ಹೊತ್ತು ಹೊತ್ತಿಗೆ’. ಈ ಕೃತಿಯಲ್ಲಿ ಕಾವ್ಯ, ಕಥೆ, ನಾಟಕ, ಪ್ರಬಂಧ, ವಿಮರ್ಶೆ, ಚರಿತ್ರೆ ಮುಂತಾದ ಕೃತಿಗಳಿಗೆ ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಬರೆದ ಮುನ್ನುಡಿ, ಟಿಪ್ಪಣಿ ಮತ್ತು ಕೃತಿ ವೈಶಿಷ್ಟ್ಯ ಕುರಿತ ಲೇಖನಗಳಾಗಿವೆ. ಕೃತಿಯ ಪರಿವಿಡಿಯಲ್ಲಿ ಶರಣಸತಿ ಲಿಂಗಪತಿ, ಸುಳಿವಾತ್ಮ ಎನ್ಒಳಗೆ, ಬೆಳಕಿನ ಅಂಗಡಿ ಮತ್ತು ರೂಪ ರೂಪಗಳನು ದಾಟಿ, ಅವಿಭಜಿತ ಧಾರವಾಡ ಜಿಲ್ಲಾ ರಂಗಮಾಹಿತಿ, ಸ್ಥಿತಪ್ರಜ್ಞ ದರ್ಶನ, ಧರ್ಮಾಮೃತ, ಕಾವ್ಯಸೂತ್ರ, ಸದಾಚಾರದ ಸಮಾರಾಧನೆ ಸೇರಿದಂತೆ 26 ಶೀರ್ಷಿಕೆಗಳನ್ನು ಹೊತ್ತ ಲೇಖನಗಳಿವೆ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE