‘ಒಳಗಣ ಹೊರಗಣ’ ಡಾ.ಬಸವರಾಜ ಡೋಣೂರ ಅವರ ಆರನೆಯ ವಿಮರ್ಶಾ ಲೇಖನಗಳ ಸಂಗ್ರಹ. ಕೃತಿಯಲ್ಲಿ ಒಟ್ಟು 52 ಲೇಖನಗಳಿದ್ದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಇಪ್ಪತ್ತಾರು ಲೇಖನಗಳಿದ್ದು, ಸಾಹಿತ್ಯದ ಭಿನ್ನ ಪ್ರಕಾರದ ಕೃತಿಗಳನ್ನು ಕುರಿತು ಬೇರೆ ಬೇರೆ ಸಂದರ್ಭ, ಉದ್ದೇಶಗಳಿಗಾಗಿ ಬರೆದ ಲೇಖನಗಳಿವೆ.
ಕುವೆಂಪು ಅವರ ಶೂದ್ರ ತಪಸ್ವಿ, ವಿ.ಕೃ.ಗೋಕಾಕರ ಅನುವಾದಿತ ನಾಟಕಗಳು, ಕಂಬಾರರ ನಾಟಕಗಳು, ಕೆರೂರು ವಾಸುದೇವಾಚಾರ್ಯರ ಅನುವಾದಿತ ನಾಟಕಗಳು, ಆಮೂರರ ನಾಟಕವಿಮರ್ಶೆ ಮೊದಲಾದ ಲೇಖನಗಳಲ್ಲಿ ನಾಟಕಗಳ ಹಾಗೂ ರಂಗಭೂಮಿ ಕುರಿತಾದ ವಿಶಿಷ್ಟ ಅಧ್ಯಯನಗಳಿವೆ. ಡಾ. ಡೋಣೂರರ ವಿಮರ್ಶೆಯ ಗಂಭೀರ ಗ್ರಹಿಕೆಗಳನ್ನು ತಮ್ಮದೇಯಾದ ಸ್ವಂತ ನಿಲುವುಗಳಿಂದ ಕೂಡಿದ ವಿಮರ್ಶಾತ್ಮಕ ತೀರ್ಮಾನಕ್ಕೆ ತಲುಪುವ ಪ್ರೌಢಿಮೆಯನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಡಾ ಬಸವರಾಜ್ ಪಿ. ಡೋಣೂರು ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ ಗ್ರಾಮದವರು. 1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ...
READ MORE