‘ಕಟ್ಟುಗಳ ಕಳಚುತ್ತಾ’ ಬೇಲೂರು ರಘುನಂದನ್ ಅವರ ಕಟ್ಟುಪದಗಳನ್ನು ಕುರಿತ ವಿಮರ್ಶಾ ಲೇಖನಗಳ ಸಂಕಲನ. ಬೇಲೂರು ರಘುನಂದನ್ ಇವತ್ತಿನ ಸಾಹಿತ್ಯ ಸಂದರ್ಭದ ಮಹತ್ವದ ಕವಿ. ನಾಟಕಕಾರ ಮತ್ತು ಕಥೆಗಾರರು. ಸಾಹಿತ್ಯ ನಿರ್ಮಿತಿಯ ಬಗೆಗಿನ ಇವರ ಕ್ರಿಯಾಶೀಲತೆ ಅಚ್ಚರಿ ಮೂಡಿಸುವಷ್ಟು ವಿಶಿಷ್ಟವಾದದ್ದು. ಕಾವ್ಯ ರಚನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಮೊದಮೊದಲು ಬೇಲೂರರು ತಮ್ಮ ರಚನೆಗಳನ್ನು ವಚನಗಳು ಎಂದೇ ಕರೆದರಾದರೂ, ಆನಂತರ ತಾವು ರಚಿಸಿದ ಆ ಕಾವ್ಯರೂಪಗಳಿಗೆ ಕಟ್ಟುಪದಗಳು ಎಂಬ ಹೊಸ ಪರಿಭಾಷೆ ರೂಪಿಸಿಕೊಂಡಿದ್ದಾರೆ. ಅವರ ಕಟ್ಟುಪದಗಳನ್ನು ಕುರಿತ ವಿಮರ್ಶಾ ಲೇಖನಗಳ ಸಂಕಲನವೇ ಈ ಕೃತಿ. ಎಲ್.ಸಿ. ರಾಜು ಅವರು ಬೇಲೂರು ರಘುನಂದನ ಅವರ ಕಟ್ಟುಪದಗಳನ್ನು ಸಂಪಾದಿಸಿ ಅಚ್ಚುಕಟ್ಟಾಗಿ ಈ ಕೃತಿಯನ್ನು ಪ್ರಕಟಿಸಿದ್ದಾರೆ.
ಕವಿ ಎಲ್. ಸಿ. ರಾಜು ಅವರು ಮೂಲತಃ ರಾಮನಗರದವರು. ‘ಮೃಗಾವತಾರಿ’ ಅವರ ಕವನ ಸಂಕಲನ. ಬೇಲೂರು ರಘುನಂದನ್ರ ಕಟ್ಟು ಪದಗಳನ್ನು ಕುರಿತು ಎಲ್. ಸಿ. ರಾಜು ‘ಕಟ್ಟುಗಳ ಕಳಚುತ್ತಾ’ ವಿಮರ್ಶಾ ಲೇಖನಗಳ ಸಂಕಲನ ರಚಿಸಿದ್ದಾರೆ. ...
READ MORE