ಸಂತ ಮತ್ತು ಸಮೀಕ್ಷೆ

Author : ವಾಣಿ ಭಂಡಾರಿ

Pages 124

₹ 150.00




Year of Publication: 2022
Published by: ಭಂಡಾರಿ ಪ್ರಕಾಶನ
Address: ಭೈರಾಪುರ, ರಿಪ್ಪನ್ ಪೇಟೆ, ಹೊಸನಗರ - 577 426, ಶಿವಮೊಗ್ಗ
Phone: 9845426931

Synopsys

ಲೇಖಕಿ ವಾಣಿ ಭಂಡಾರಿ ಅವರ ವಿಮರ್ಶೆಗಳ ಸಂಕಲನ ‘ಸಂತ ಮತ್ತು ಸಮೀಕ್ಷೆ’. ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು ಆದರೆ ಪ್ರೀತಿಸದಿದ್ದರೆ ಮನುಷ್ಯತ್ವಕ್ಕೆ ಎಲ್ಲಿ ಬೆಲೆ ಇದೆ? “ಪ್ರೇಮವಿದ್ದರೆ ಕಲ್ಲು ಕರಗಿ ಎಣ್ಣೆಯಾಗುತ್ತದೆ ಪ್ರೇಮವಿಲ್ಲದಿದ್ದರೆ ಮೇಣವು ಕಬ್ಬಿಣವಾಗುತ್ತದೆ” “ಜಲಾಲುದ್ದೀನ್ ರೂಮಿಯ ಅವರು ಬರೆದ ಈ ಶೇರ್ ಅದೆಷ್ಟುಅರ್ಥಪೂರ್ಣವಾಗಿ ಅರ್ಥ ಗರ್ಭಿತವಾಗಿದೆ.ಮನುಷ್ಯ ಪ್ರೀತಿಗೆ ಸೂಕ್ತವಾದ ಶೇರ್ ಮನವನ್ನು ತಟ್ಟುತ್ತದೆ. ಈ ಕಾರಣದಿಂದಲೇ ನನ್ನ ಸಂತ ಜಗದ ತುಂಬಾ ಪ್ರೀತಿಯನ್ನು ಹಂಚುತ್ತಾ ಎಲ್ಲರ ಬೊಗಸೆಯಲ್ಲಿ ಪ್ರೀತಿ ತುಂಬಿಸಿ ಧ್ಯಾನಸ್ಥನಾಗಿ ಸಹೃದಯರ ಹೃದಯ ಮಂಡಲದಲ್ಲಿ ಸ್ಥಿತನಾಗಿ ಅವರ ಮನದ ಭಾವಗಳೆಲ್ಲವೂ ಲೇಖನಿಯ ಮೂಲಕ ವಿಮರ್ಶಾ ಬರಹವಾಗಿ ಹೊರಹೊಮ್ಮಿದ್ದು ಸಂತಸದ ಸಂಗತಿ. ಇಲ್ಲಿ ಮಹನೀಯರಾದ ಕವಿಗಳು ಸಹೃದಯರು, ವಿದ್ವಾಂಸರು, ಬಹಳಷ್ಟು ಹೃದಯ ಭಾವ ಹೊಮ್ಮಿಸಿ ಸಂತನನ್ನು ಭಾವಪೀಠದಲ್ಲಿರಿಸಿ ಚಿತ್ರಿಸಿ, ಅಲಂಕರಿಸಿ ಪೂಜಿಸಿ ಅವರವರದ ಜತನಗೈದಿರುತ್ತಾರೆ ಎಂಬುದಾಗಿ ಖುದ್ದು ಲೇಖಕಿ ಬೆನ್ನುಡಿಯ ಮಾತುಗಳಲ್ಲಿ ಬರೆದಿದ್ದಾರೆ.

About the Author

ವಾಣಿ ಭಂಡಾರಿ
(24 July 1982)

ವಾಣಿ ಭಂಡಾರಿ ಅವರು ಮೂಲತಃ ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಭೈರಾಪುರದವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವೀಧರರು. ವೃತ್ತಿಯಿಂದ ಉಪನ್ಯಾಸಕರು. ಆಯುರ್ವೇದಿಕ್ ಉತ್ಪನ್ನಗಳ ಡೀಲರ್ ಆಗಿಯೂ, ಭಾವಗೀತೆ, ಕವನ,ಕಥೆ,  ನ್ಯಾನೋಕಥೆ, ಕಾದಂಬರಿ,ಚುಟುಕು,ಹನಿಗವನ,ಲೇಖನ, ಅಂಕಣ, ಶಾಯರಿ, ಗಜಲ್ ಆಧುನಿಕ ವಚನಗಳು, ತುಣುಕುಗಳು ಬರೆಯುವ ಹವ್ಯಾಸ. ನಾಡಿನ ಹಲವಾರು ಪತ್ರಿಕೆಯಲ್ಲಿ ವಿಮರ್ಶಾ ಅಂಕಣ, ಸತ್ಯವಾಣಿ ಕಟೋಕ್ತಿ, ವ್ಯಕ್ತಿತ್ವ ವಿಕಸನ ಅಂಕಣಗಳು ಪ್ರಕಟಗೊಂಡಿವೆ.  ಕೃತಿಗಳು : ಅಂತರ್ ದೃಷ್ಟಿ- ವಿಮರ್ಶಾ ಸಂಕಲನ, ತುಂಗೆ ತಪ್ಪಲಿನ ತಂಬೆಲರು ಭಾಗ:1+2 (ಸಂಶೋಧಾನ್ಮತಕ‌ ಕೃತಿ), ಸಂತನೊಳಗಿನ ಧ್ಯಾನ ...

READ MORE

Related Books