‘ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಪರಿಕಲ್ಪನೆ’ ಬಿ. ಪಿ. ಆಶಾಕುಮಾರಿ ಅವರ ಕೃತಿಯಾಗಿದೆ. ಹೆಣ್ಣು ತನ್ನ ಕಾವ್ಯಗಳಲ್ಲಿ ಹೆಣ್ಣನ್ನು ಹೇಗೆ ಪರಿಭಾವಿಸಿದ್ದಾಳೆಂಬ ಒಂದು ಅಧ್ಯಯನ ಇಲ್ಲಿ ಮೂಡಿಬಂದಿದೆ. ಹೆಣ್ಣಿನ ಅಂತರಂಗದ ಪಿಸುಮಾತುಗಳು ಮಹಿಳಾ ಕಾವ್ಯಗಳಲ್ಲಿ ಕೇಳಿಸುತ್ತಿದೆಯೇ ಎಂಬ ಹುಡುಕಾಟ.
ಲೇಖಕಿ ಆಶಾಕುಮಾರಿ ಅವರು ಮೂಲತಃ ಕೊಡಗಿನವರು. ತಂದೆ ಬಡುವಂಡ ಬಿ. ಪೂವಯ್ಯ, ತಾಯಿ ಬಿ.ಪಿ. ಸೀತಮ್ಮ. ’ಬಿ.ಎಂ. ಶ್ರೀಕಂಠಯ್ಯ, ಜಿ. ಎಸ್. ಶಿವರುದ್ರಪ್ಪ, ಜಿ. ಎಸ್. ಭಟ್ಟ, ಕೊಡಗಿನ ಗೌರಮ್ಮ’ ಅವರ ಜೀವನ ಚರಿತ್ರೆಗಳನ್ನು ರಚಿಸಿದ. ’ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಪರಿಕಲ್ಪನೆ, ಕಾಸ್ತಾಳಿ’ ಅವರ ಸಂಶೋಧನಾ ಕೃತಿಗಳು. ’ಸ್ಪಂದನ, ಯಾರು ಹೆಚ್ಚು? ಹೊನ್ನಹೊಂಗೆ, ಉಳ್ಳವರು ಶಿವಾಲಯ ಮಾಡುವರು, ಸ್ವಾವಲಂಬನೆ ಬದುಕು ಅಥವಾ ಉದ್ಯೋಗ, ನಂಬಿಕೆಗಳು’ ಅವರ ಮತ್ತಿತರ ಕೃತಿಗಳು. ...
READ MOREಹೊಸತು - ಮೇ -2005
ಜೀವನಾನುಭವವಿಲ್ಲದೆ. ಸಾಹಿತ್ಯರಚನೆ ಅಸಾಧ್ಯ. ಸ್ವಾನುಭವ ಅಥವಾ ಇತರರ ಅನುಭವದ ಅವಲೋಕನ ಅಲ್ಲಿ ಮುಖ್ಯ ಹೆಣ್ಣಿನ ಪರಿಕಲ್ಪನೆ - ಬಂಡವಾಳವಾಗುತ್ತದೆ. ಹೆಣ್ಣಿರಲಿ, ಗಂಡಿರಲಿ ಸಾಹಿತ್ಯದ ಮೂಲಕ ತನ್ನ ವಿಚಾರಗಳನ್ನು ಅಭಿವ್ಯಕ್ತಿಪಡಿಸಲು ಇಬ್ಬರೂ ಸ್ವತಂತ್ರರಷ್ಟೇ ಅಲ್ಲ ಅರ್ಹರೂ ಹೌದು. ಆದರೂ ಪ್ರಾಚೀನ ಕಾಲದಿಂದಲೂ ಸಾಹಿತ್ಯವನ್ನವಲೋಕಿಸಿದಾಗ ಲೇಖಕಿಯರ ಸಂಖ್ಯೆ ಲೇಖಕರಿಗೆ ಹೋಲಿಸಿದರೆ ತೀರ ಕಡಿಮೆಯಿದೆ. ಆಧುನಿಕ ಸಾಹಿತ್ಯದಲ್ಲಿ ತೀರ ಇತ್ತೀಚೆಗೆ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆ ಬಲವಾದ ಹೆಜ್ಜೆಯನ್ನೂರಿದ್ದಾಳೆ. ಇಂಥ ಬದಲಾವಣೆಯನ್ನು ದೃಷ್ಟಿಯಲ್ಲಿಟ್ಟು ಹೆಣ್ಣು ತನ್ನ ಕಾವ್ಯಗಳಲ್ಲಿ ಹೆಣ್ಣನ್ನು ಹೇಗೆ ಪರಿಭಾವಿಸಿದ್ದಾಳೆಂಬ ಒಂದು ಅಧ್ಯಯನ ಇಲ್ಲಿ ಮೂಡಿಬಂದಿದೆ. ಹೆಣ್ಣಿನ ಅಂತರಂಗದ ಪಿಸುಮಾತುಗಳು ಮಹಿಳಾ ಕಾವ್ಯಗಳಲ್ಲಿ ಕೇಳಿಸುತ್ತಿದೆಯೇ ಎಂಬ ಹುಡುಕಾಟ.