‘ಡಾ. ದೊಡ್ಡರಂಗೇಗೌಡರ ಆಯ್ದ ಕವಿತೆಗಳ ಪ್ರಾಯೋಗಿಕ ವಿಮರ್ಶೆ’ ಕೃತಿಯು ರಾಜಶೇಖರ ಜಮದಂಡಿ ಹಾಗೂ ಸಂಕಮ್ಮ ಜಿ. ಸಂಕಣ್ಣನವರ ವಿಮರ್ಶಾ ಸಂಕಲನವಾಗಿದೆ. ಈ ಕೃತಿಯು ನಾಡೋಜ ಮಹೇಶ ಜೋಶಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಹಾಗೂ ಲಿಂಗಯ್ಯ ಬಿ. ಹಿರೇಮಠ ಅವರ ಸಂಪಾದನೆಯಲ್ಲಿ ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ. ಈ ಕೃತಿಯು ದೊಡ್ಡರಂಗೇಗೌಡರ ಕಾವ್ಯದ ಕುರಿತ ಹೊಸ ಚರ್ಚಗೆ ಪೂರಕವಾಗಿದೆ. ಬಹಳ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಪ್ರಾಯೋಗಿಕ ವಿಮರ್ಶೆಯ ಪ್ರಾಕಾರಕ್ಕೆ ಹೊಸ ನೆಲೆಯನ್ನು ಕಲ್ಪಿಸಿದೆ. ದೊಡ್ಡರಂಗೇಗೌಡರ ಕವಿತೆಗಳ ಆಳವನ್ನು ಕಟ್ಟಿಕೊಡುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.