ಕನ್ನಡ ಸಾಂಸ್ಕೃತಿಕ ಚರಿತ್ರೆಯಲ್ಲಿ ವಚನ ಸಾಹಿತ್ಯದ ಮುಂಚೂಣಿಯ ಸ್ಥಾನ ಪಡೆದುಕೊಂಡಿರುವ ಬಸವಣ್ಣನವರ ಚಿಂತನೆಗಳನ್ನು, ಮರು ಓದಿಗೆ ಒಳಪಡಿಸಿ ಇಂದಿಗೂ ಪ್ರಸ್ತುತವಾಗಿರುವ ಆ ಚಿಂತನೆಗಳನ್ನು ಹಲವು ದೃಷ್ಟಿಕೋನಗಳಲ್ಲಿ ವಿಮರ್ಶಾತ್ಮವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಂಶಗಳೆಂದರೆ: ವೀರಶೈವ ಚಳವಳಿಯ ಹುಟ್ಟು , ವಚನ ಚಳವಳಿ ಮತ್ತು ಬಸವಣ್ಣ , ಪ್ರಭುತ್ವ, ದಲಿತರು ಮಹಿಳೆ; ಬಸವಣ್ಣನ ನಿಲುವು. ,ಆಧುನಿಕಪೂರ್ವ ಪಠ್ಯ, ಜನಪದ ಪಠ್ಯಗಳು: ಬಸವಣ್ಣನನ್ನು ಕುರಿತ ಗ್ರಹಿಕೆಗಳು , ಆಧುನಿಕ ಪಠ್ಯಗಳು : ಬಸವಣ್ಣನ ಕುರಿತ ಗ್ರಹಿಕೆಗಳು , ಬಸವಣ್ಣನ ವಚನಗಳಲ್ಲಿ ಸಾಹಿತ್ಯ ತತ್ವಗಳು , ಬಸವಣ್ಣನವರ ವಚನಗಳ ಶಿಲ್ಪವಿಧಾನ ,ಬಸವಣ್ಣನ ಪ್ರತಿನಿಧೀಕರಣದ ಅನುಸಂಧಾನಗಳು
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...
READ MORE