ರಸಸಿದ್ಧಿ

Author : ಬೈರಮಂಗಲ ರಾಮೇಗೌಡ

Pages 224

₹ 200.00




Year of Publication: 2013
Published by: ಸಿ.ವಿ.ಜಿ ಪಬ್ಲಿಕೇಶನ್ಸ್
Address: ನಂ.277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು-560058.
Phone: 9341258142

Synopsys

ಪ್ರತಿಭಾ ಸಂಸ್ಫೂರ್ತಿ ಮತ್ತು ಶುದ್ಧ ವೈಚಾರಿಕ ಸಾಮರ್ಥ್ಯಗಳ ಸಂಗಮದಿಂದ ಸ್ವಯಂ ಪ್ರಕಾಶವಾಗಿರುವ ಕುವೆಂಪು ಕಾವ್ಯದ ಅಧ್ಯಯನವನ್ನೊಳಗೊಂಡ 'ರಸಸಿದ್ದಿ'ಯೆಂಬ ಬೈರಮಂಗಲ ರಾಮೇಗೌಡರ ಈ ಮೌಲಿಕ ಪ್ರಮಾಣಭೂತ ಗ್ರಂಥ. ಕುವೆಂಪು ಕಾವ್ಯರಾಶಿಯಲ್ಲಿ ಪ್ರಕೃತಿ - ಪ್ರಣಯ - ಅಧ್ಯಾತ್ಮಗಳನ್ನು ಅರ್ಥೈಸಿಕೊಳ್ಳಲು, ಅರ್ಥೈಸಿಕೊಂಡದ್ದನ್ನು ಅಭಿವ್ಯಕ್ತಗೊಳಿಸಲು ನಿರಂತರ ಅಧ್ಯಯನ, ಧ್ಯಾನ, ಪ್ರಾರ್ಥನೆ, ತಪೋಲಬ್ಬವಾದ ದಾರ್ಶನಿಕ ಪ್ರತಿಭೆ ಅನಿವಾಯ್ಯ. ಈ ಗೀತೆಗಳನ್ನು ಕುರಿತಂತೆ ಹಲವು ವಿಶ್ಲೇಷಣೆಗಳು ಈಗಾಗಲೇ ಪ್ರಕಟಗೊಂಡಿವೆಯಾದರೂ, ರಾಮೇಗೌಡರ ಈ ವಿಮರ್ಶೆ ವಿಶಿಷ್ಟವಾಗಿದೆ. ಕುವೆಂಪು ಅವರ ಕಾವ್ಯಗಳ ಅಧ್ಯಯನ ಸಮರ್ಪಕವಾಗಿ ಹೇಳುವುದರ ಮುಲಕ ಮಹಾಕವಿಯ ಹೃನ್ನನಗಳ ಅಂತರಾಳದ ಆಧ್ಯಾತ್ಮಿಕ ರಹಸ್ಯಗಳನ್ನೆಲ್ಲ ಸುಸ್ಪಷ್ಟವಾಗ ಗ್ರಹಿಸಿ ಲೇಖಕರು ಚಿತ್ರಿಸಿದ್ದಾರೆ. ಕುವೆಂಪು ಅವರ ಕಾವ್ಯಾಭ್ಯಾಸಿಗಳಿಗೆ ಈ ಪುಸ್ತಕ ಅಮೂಲ್ಯ ಮಾರ್ಗದರ್ಶಿಯಾಗಬಹುದು.

About the Author

ಬೈರಮಂಗಲ ರಾಮೇಗೌಡ

ಜನ್ಮಸ್ಥಳ ರಾಮನಗರ ಜಿಲ್ಲೆಯ ಬೈರಮಂಗಲ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿAದ ಕನ್ನಡ ಎಂ.ಎ. ,ಮೈಸೂರು ವಿಶ್ವವಿದ್ಯಾನಿಲಯದಿಂದ `ಕುವೆಂಪು ಕಾವ್ಯ' ಕುರಿತ ಸಂಶೋಧನೆಗೆ ಪಿಎಚ್.ಡಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಕೇಂದ್ರಗಳಲ್ಲಿ 35 ವರ್ಷಗಳ ಬೋಧನಾನುಭವ.  ಕಥೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಅಂಕಣ ಬರಹ, ಮಕ್ಕಳ ಸಾಹಿತ್ಯ, ಸಂಪಾದನೆ, ಅಭಿನಂದನೆ ಪ್ರಕಾರಗಳಲ್ಲಿ 40ಕ್ಕೂ ಹೆಚ್ಚು ಕೃತಿಗಳ ಪ್ರಕಟಣೆ. ಸಿವಿಜಿ ಪಬ್ಲಿಕೇಷನ್ಸ್ನಿಂದ `ಕುವೆಂಪು 108 ನೇ ಜನ್ಮ ದಿನಕ್ಕೆ 108 ಕೃತಿಗಳು' ಮಾಲಿಕೆ ಮತ್ತು `ಕುವೆಂಪು ಸಾಹಿತ್ಯ' ಮಾಲಿಕೆಯ 25 ಕೃತಿಗಳ ಸಂಪಾದಕ.  ಕೆಲವು ಪ್ರಕಟಿತ ಕೃತಿಗಳು ...

READ MORE

Related Books