‘ಸಂಸ್ಕೃತಿ ದನಿಗಳು’ ಡಾ. ವಿಜಯಾ ಸುಬ್ಬರಾಜ್ ಅವರ ಅಂಕಣ ವಿಮರ್ಶೆಗಳ ಸಂಕಲನ. ವಿಮರ್ಶೆಗೆ ಒಳಗಾಗಿರುವ ಕೃತಿಗಳಲ್ಲಿ ಇಂಗ್ಲಿಷ್, ಹಿಂದಿ, ಕೊಂಕಣಿ, ತೆಲುಗು, ಮಲೆಯಾಳಂ ಮುಂತಾದ ಭಾಷೆಗಳಿಂದ ಅನುವಾದಿತವಾಗಿ ಬಂದ ಕೃತಿಗಳೂ ಕನ್ನಡ ಕೃತಿಗಳ ಜೊತೆಗೆ ಸೇರಿವೆ. ವಿವಿಧ ಭಾಷೆಗೆ ಸಂಬಂಧಿಸಿದ ಕೃತಿಗಳಾಗಿರುವುದಷ್ಟೇ ಅಲ್ಲದೆ ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಪ್ರಬಂಧಗಳು, ಆತ್ಮಚರಿತ್ರೆಗಳು ಮೊದಲಾದವು, ಮಹಾಸಂಪರ್ಕದಂತಹ ಒಂದು ವಿಶಿಷ್ಟ ಕೃತಿಯೂ ಇವುಗಳ ಜೊತೆಗೆ ಸೇರ್ಪಡೆಯಾಗಿದೆ. ಕೆಲವು ಅತ್ಯಂತ ಮಹತ್ವದ ಮತ್ತು ಪೂರ್ಣ ಪ್ರಮಾಣದ ವಿಮರ್ಶೆ ಅಥವಾ ಸಮಗ್ರ ವಿವೇಚನೆಯನ್ನು ಬಯಸುತ್ತವೆಯಾದರೂ ಸ್ಥಳಾವಕಾಶದ ಕೊರತೆಯಿಂದ ಸ್ಥೂಲ ಪರಿಚಯಕ್ಕೆ ಸೀಮಿತಗೊಳಿಸಲಾಗಿದೆ. ಕೆಲವೊಮ್ಮೆ ಒಬ್ಬರೇ ಲೇಖಕರ ಅಥವಾ ಇಬ್ಬರು ಮೂವರು ಲೇಖಕರ ಕೃತಿಗಳನ್ನು ಒಟ್ಟಿಗೆ ಒಂದೇ ಅಂಕಣದಲ್ಲಿ ವಿಮರ್ಶಿಸಬೇಕಾದ ಅಗತ್ಯದಿಂದಾgi ಕೇವಲ ಪರಿಚಯವೆನಿಸುವಷ್ಟಕ್ಕೆ ಮಾತ್ರ ಸೀಮಿತಗೊಳಿಸಿ ಕೊಳ್ಳಲಾಗಿದೆ. ಇಲ್ಲಿ ವಿಮರ್ಶೆಗೆ ಒಳಗಾಗಿರುವ ಕೃತಿಗಳು ಹಲವು ಬಗೆಯ ಸಾಂಸ್ಕೃತಿಕ ಮುಖಗಳನ್ನು ಬಿಂಬಿಸುತ್ತವೆ. ಭಿನ್ನ ಭಿನ್ನ ವ್ಯಕ್ತಿ ಸಂಸ್ಕೃತಿ, ಸ್ವಭಾವ ಸಂಸ್ಕೃತಿ, ಪ್ರದೇಶ ಸಂಸ್ಕೃತಿಗಳನ್ನು ಕಥಾವಸ್ತುವಿನ ಮೂಲಕವಾಗಿ, ವೈವಿಧ್ಯಮಯವಾಗಿ ಕಾಣುವಂತೆ, ಕೇಳುವಂತೆ ನಿರೂಪಿತವಾಗಿವೆ.
ವಿಜಯಾ ಸುಬ್ಬರಾಜ್ ಅವರು ಬೆಂಗಳೂರಿನಲ್ಲಿ 1947 ಏಪ್ರಿಲ್ 20ರಂದು ಜನಿಸಿದರು. ತಾಯಿ ಲಕ್ಷ್ಮಿ, ತಂದೆ ಸೀತಾರಾಂ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದ ಕೃಷಿಯಲ್ಲಿ ತೊಡಗಿಕೊಂಡಿರುವ ಇವರು ಬಿಯುಸಿಟಿಎ ನ ಉಪಾಧ್ಯಕ್ಷೆ, ಕನ್ನಡ ನುಡಿ ನಿಯತಕಾಲಿಕೆಯ ಸಂಪಾದಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯಾ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ...
READ MORE