`ಸಂಜಯ' ಎಂಬುದು ಮಹಾಕಾವ್ಯದ ಒಂದು ಪಾತ್ರ. ಈ ಕುರಿತು ಲೇಖಕ ಎನ್. ರಂಗನಾಥಶರ್ಮಾ ವಿಶ್ಲೇಷಿಸಿದ್ದಾರೆ. ಮಹಾಭಾರತ ಯುದ್ಧದ ಕಥೆಯನ್ನೆಲ್ಲ ಯುದ್ಧ ನಡೆಯುತ್ತಿದ್ದಾಗಲೇ ಧೃತರಾಷ್ಟ್ರನಿಗೆ ವಿವರಿಸಿದ. ಧೃತರಾಷ್ಟ್ರನ ಸಾರಥಿ, ಮಂತ್ರಿಯಂತೆ ಮಹಾರಾಜನಿಗೆ ಬುದ್ಧಿವಾದ ಹೇಳಿದ ಸಾತ್ವಿಕ, ಧರ್ಮಾತ್ಮ ಸಂಜಯ ಎಂದು ಸಂಜಯನ ಕುರಿತಾಗಿ ಹೇಳಲಾಗಿದೆ. ಮಹಾಭಾರತದಲ್ಲಿ ಅಷ್ಟಾಗಿ ಕಾಣದ ಸಂಜಯನು ಎಷ್ಟು ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಸಂಜಯ ಇಡೀ ಮಹಾಭಾರತದಲ್ಲಿ ಕಾಣುವ ಅತ್ಯಂತ ತಾಳ್ಮೆಯ ಮನುಷ್ಯ. ವಿಶೇಷ ವರವಿದ್ದ ಆತನು ಯುದ್ದ ಭೂಮಿಯಲ್ಲಿ ನಡೆಯುತ್ತಿದ್ದ ವಿಷಯದ ವರದಿಗಳನ್ನು ರಾಜ ಧೃತರಾಷ್ಟ್ರನಿಗೆ ಅರಮನೆಯಲ್ಲೇ ಕುಳಿತು ಹೇಳುತ್ತಿದ್ದ ಬಗೆಯನ್ನು ಈ ಕೃತಿಯಲ್ಲಿ ಲೇಖಕರು ನವಿರಾಗಿ ವಿವರಿಸಿದ್ದಾರೆ.
©2025 Book Brahma Private Limited.