ಅನುವರ್ತನ

Author : ಎಚ್.ಎಸ್. ಹರಿಶಂಕರ್

Pages 311

₹ 200.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಅನುವರ್ತನ ಕೃತಿಯಲ್ಲಿ ಮುಖ್ಯವಾಗಿ ಸಂಶೋಧನೆ, ಭಾಷಾಂತರ ತತ್ವ , ಸಿದ್ಧಾಂತಗಳು ಹಾಗೂ ಪರಿಚಯಾತ್ಮಕ ವಿಮರ್ಶೆಗೆ ಹೆಚ್ಚು ಒತ್ತು ನೀಡಲಾಗಿದೆ. ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಕುರಿತಂತೆ ಒಂದು ಪ್ರಬಂಧವನ್ನು ಇಲ್ಲಿ ದಿಕ್ಸೂಚಿಯಾಗಿ ಸೇರಿಸಲಾಗಿದೆ. 17ನೇ ಶತಮಾನಕ್ಕೆ ಸಂಬಂಧಿಸಿದ ಲೇಖನಗಳಿವೆ. ಪಂಪ ರನ್ನರ ಕಾಲದ ಸಾಹಿತ್ಯ ಕುರಿತು ಈ ಕೃತಿಯಲ್ಲಿ ಲೇಖಕ ಪ್ರೊ. ಎಚ್. ಎಸ್. ಹರಿಶಂಕರ್ ಆಳವಾಗಿ ವಿಶ್ಲೇಷಿಸಿದ್ದಾರೆ.

About the Author

ಎಚ್.ಎಸ್. ಹರಿಶಂಕರ್
(08 December 1940)

ಲೇಖಕರಾಗಿ, ಉತ್ತಮ ಭಾಷಾಂತರಕಾರರಾಗಿ ಅದರಲ್ಲೂ ರಷ್ಯನ್ ಭಾಷೆಯಲ್ಲಿ ಪ್ರಭುತ್ವಸಾಧಿಸಿ, ನೇರವಾಗಿ ರಷ್ಯನ್ ಭಾಷೆಯಿಂದಲೇ ಹಲವಾರು ರಷ್ಯನ್ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿರುವ ಹರಿಶಂಕರರು ಹುಟ್ಟಿದ್ದು ಹರಿಹರದಲ್ಲಿ. ತಂದೆ ಪ್ರಸಿದ್ಧ ಸಾಹಿತಿಗಳು, ಶಾರದಾಮಂದಿರದ ಪ್ರಕಾಶಕರೂ ಆದ ಎಚ್.ಎಂ. ಶಂಕರನಾರಾಯಣ ರಾಯರು, ತಾಯಿ ಲಕ್ಷ್ಮೀ ದೇವಮ್ಮ. ಹರಿಹರದಲ್ಲಿ ಪ್ರಾರಂಭಿಕ ಶಿಕ್ಷಣ, ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ. ಇಂಟರ್‌ಮೀಡಿಯಟ್, ಸೀನಿಯರ್ ಇಂಟರ್‌ಮೀಡಿಯಟ್ ಹಾಗೂ ಪದವಿಗಾಗಿ ಓದಿದ್ದು ಮೈಸೂರಿನ ಯುವರಾಜ ಕಾಲೇಜು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಕನ್ನಡ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರಷ್ಯನ್ ಭಾಷೆ, ಎಂ.ಎ.ಪದವಿಗಳು ಮತ್ತು ಎಂ.ಫಿಲ್ (ಭಾಷಾಂತರ) ಮೈಸೂರು ವಿಶ್ವವಿದ್ಯಾಲಯ; ಡಿಪ್ಲೊಮ ...

READ MORE

Related Books