ಕಂಬಾರರ ಸಾಹಿತ್ಯದ ನೆಲೆ ಬೆಲೆ

Author : ಬಸವರಾಜ ಕಲ್ಗುಡಿ

Pages 340

₹ 250.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಕವಿ-ನಾಟಕಕಾರ ಎಂದೇ ಚಿರಪರಿಚಿತರಿದ್ದರೂ ಅವರೊಬ್ಬ ಉತ್ತಮ ಕಾದಂಬರಿಕಾರ, ರಂಗ ಹಾಗೂ ಜಾನಪದ ತಜ್ಞರು ಕೂಡ. ಕಂಬಾರ ಅವರ ಕಾವ್ಯ-ನಾಟಕ-ಕಾದಂಬರಿಗಳ ಕುರಿತ ವಿಮರ್ಶಾತ್ಮಕ ಲೇಖನಗಳನ್ನು ಒಳಗೊಂಡಿವೆ. ಹಿರಿಯ ವಿಮರ್ಶಕ ಬಸವರಾಜ ಕಲ್ಗುಡಿ ಅವರು ಈ ಸಂಪುಟವನ್ನು ಸಂಪಾದಿಸಿದ್ದಾರೆ. ಮುನ್ನುಡಿಯಲ್ಲಿ ಕಲ್ಗುಡಿ ಅವರು ಹೀಗೆ ಬರೆದಿದ್ದಾರೆ-

ಕಂಬಾರರ ಕಾವ್ಯ, ನಾಟಕ, ಕಾದಂಬರಿಗಳು ಹಿಡಿದಿಡುವ ಕಥನವು ಕನ್ನಡದ ಚಿಂತನೆಯಲ್ಲಿ ಯಾವ ಬಗೆಯ ರಸಗ್ರಹಣಕ್ಕೆ, ವ್ಯಾಖ್ಯಾನಕ್ಕೆ ಹಾಗೂ ಸಂವಾದಕ್ಕೆ ಗುರಿಯಾಗಿದೆ ಎನ್ನುವುದನ್ನು ತಿಳಿಯುವ ಕೆಲಸವು, ಅವರ ಕೃತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಇನ್ನಷ್ಟು ಸಹಕಾರಿಯಾಗುತ್ತದೆ. ಆಧುನಿಕ ಕನ್ನಡದ ಚಿಂತನಾಲೋಕವು ಕಂಬಾರರ ಕೃತಿಗಳ ಜೊತೆಗೆ ಅಗಾಧವಾದ ಸಂವಾದವನ್ನು ಮಾಡಿದೆ. ಕಂಬಾರರ ಸಾಹಿತ್ಯ ಲೋಕದೊಳಗಿನ, ಕಲ್ಪನಾ ಲೋಕವು ತಂದುಕೊಟ್ಟ ಪ್ರತಿಭಾ ವಿನ್ಯಾಸವು ದೊಡ್ಡ ಹರಹಿನದು ಎನ್ನುವುದನ್ನು ಈ ಸಂವೇದನೆಯು ಗುರುತಿಸಿದೆ. ಆಧುನಿಕ ಕನ್ನಡದ ಬರಹದಲ್ಲೇ ಒಂದು ವಿಶಿಷ್ಟವಾದ, ವಿಭಿನ್ನವಾದ ದಾರಿಯನ್ನೂ, ಸೂಕ್ಷ್ಮ ಕಲಾಕುಸುರಿಯ ವೈವಿಧ್ಯತೆಯನ್ನೂ ಕಂಬಾರರ ಸಾಹಿತ್ಯ ಸೃಷ್ಟಿಸಿದೆ. ಕಂಬಾರರ ಸಾಹಿತ್ಯವನ್ನು ವಿಭಿನ್ನ ದೃಷ್ಟಿಯಲ್ಲಿ ನೋಡಿದ ಕನ್ನಡ ಚಿಂತನಾಲೋಕದ ವಿಶಿಷ್ಟವಾದ ಆಯ್ದ ಲೇಖನಗಳನ್ನು ಇಲ್ಲಿ ಸಂಪಾದಿಸಲಾಗಿದೆ. ಕಂಬಾರರ ಸಾಹಿತ್ಯ ಗ್ರಹಿಕೆಗೆ ಅವುಗಳ ವೈವಿಧ್ಯತೆ ಮತ್ತು ತಾತ್ವಿಕತೆಯ ಆಯಾಮಗಳ ಗ್ರಹಿಕೆಗೆ ಇವುಗಳು ಸಾಕಷ್ಟು ಅವಕಾಶ ಮಾಡಿಕೊಡುತ್ತವೆ ಎನ್ನುವ ನಂಬಿಕೆ ನನ್ನದು. ವಿಭಿನ್ನಚಿಂತನೆಯ ನೆಲೆಯಿಂದ ಬಂದ ಲೇಖಕರು ಕಂಬಾರರಿಗೆ ನುಡಿಯುವ ರೀತಿಯ ವೈವಿಧ್ಯತೆಯನ್ನು ಇಲ್ಲಿ ಓದುಗರು ಗ್ರಹಿಸಬಹುದಾಗಿದೆ.

About the Author

ಬಸವರಾಜ ಕಲ್ಗುಡಿ

1956ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಬಸವರಾಜ ಕಲ್ಗುಡಿ ಅವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು.  ಎಂ.ಎ. (1975) ಪದವೀಧರರು. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು' ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ. ಕರ್ನಾಟಕದಲ್ಲಿಯ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ'. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ದರೂ, ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿ ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿಯ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು, ...

READ MORE

Related Books