‘ಓದಿನ ಓದು’ ಶುಭಶ್ರೀ ಪ್ರಸಾದ್ ಅವರ ರಚನೆಯ ವಿಮರ್ಶಾ ಲೇಖನಗಳ ಸಂಗ್ರಹವಾಗಿದೆ. ಈ ಸಂಕಲನದಲ್ಲಿ ಸಿ.ಪಿ.ಕೆ., ಕೆ.ಸತ್ಯನಾರಾಯಣ, ಕೆ.ವಿ.ತಿರುಮಲೇಶ್‌ರಂತಹ ಕನ್ನಡದ ಮಹತ್ವಪೂರ್ಣ ಸಾಹಿತಿಗಳ ಕೃತಿಗಳ ವಿಶ್ಲೇಷಣೆಯಿದೆ; ಜತೆಗೆ ಇತರ ಹಲವು ಗಮನಾರ್ಹ ಲೇಖಕರ ಪುಸ್ತಕಗಳ ಪರಿಚಯವೂ ಮೂಡಿಬಂದಿದೆ. ಪುಸ್ತಕಗಳನ್ನು ವಿಮರ್ಶೆಗೆ ಒಳಪಡಿಸುವ ಸಮಯದಲ್ಲೇ, ಸಾಮಾನ್ಯ ಓದುಗರಿಗೆ ಆ ಕೃತಿಯ ಸಾರವನ್ನು ತಿಳಿಸಿ, ಅವರು ಕೃತಿಯನ್ನು ಓದುವಂತೆ ಪ್ರೇರೇಪಿಸುವ ಕೆಲಸವನ್ನೂ ಇಲ್ಲಿನ ಬರಹಗಳು ಮಾಡಿವೆ. ಕಾದಂಬರಿ, ಆತ್ಮಕಥೆ, ಕವನ ಸಂಕಲನ, ವಿಮರ್ಶಾಗ್ರಂಥ ಮೊದಲಾದ ಹಲವು ವಿಧದ ಪುಸ್ತಕಗಳನ್ನು ವಿಮರ್ಶೆಗೆ ಒಳಪಡಿಸಿರುವುದನ್ನು ಕಾಣಬಹುದು.
ಶುಭಶ್ರೀ ಪ್ರಸಾದ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆ ಕವನ ರಚನೆ, ಚಿತ್ರಗ್ರಹಣ, ವಾರ್ತಾವಾಚನ, ಕಾರ್ಯಕ್ರಮ ನಿರೂಪಣೆ, ಪತ್ರಿಕೆಗಳಿಗೆ ಲೇಖನ/ಪ್ರಬಂಧ ಬರೆಯುದು ಅವರ ಹವ್ಯಾಸವಾಗಿದೆ. ಕೃತಿಗಳು: ಕನ್ನಡ ಸಾಹಿತ್ಯದಲ್ಲಿ ದೇಗುಲ ಪರಿಕಲ್ಪನೆ (ಮಹಾಪ್ರಬಂಧ) ,ಹಣತೆ ಬೆಳಕು (ಕವನ ಸಂಕಲನ) ಒಡಲ ಕರೆಗೆ ಓಗೊಟ್ಟು (ಕಥಾ ಸಂಕಲನ), ಒಳಮನ (ಲೇಖನ ಸಂಗ್ರಹ) , ಹೂದಂಡೆಯ ಬೇಲಿ (ಕವನ ಸಂಕಲನ) ,ಮಂಜಿನಮಧುಪಾತ್ರೆ (ಪ್ರವಾಸ ಕಥನ) ಕಲ್ಲುಹಾಸಿನ ಮೇಲೆ ತಕಧಿಮಿ (ಲಲಿತ ಪ್ರಬಂಧಗಳು) ಶುಭನುಡಿ (ಮುಕ್ತಕಗಳು) . ಪ್ರಶಸ್ತಿಗಳು: ಡಾ. ಹೆಚ್.ಡಿ.ಚೌಡಯ್ಯ ರಾಜ್ಯಮಟ್ಟದ ಸಾಹಿತ್ಯ ಪ್ರಶಸ್ತಿ, ಜೀ.ಶಂ.ಪ ವೇದಿಕೆಯಿಂದ ...
READ MORE