ಸೃಜನಕ್ರಿಯೆ ಮತ್ತು ಸಂವೇದನೆ

Author : ಸುರೇಂದ್ರನಾಥ ಮಿಣಜಗಿ

Pages 136

₹ 80.00




Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್ ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು -560004

Synopsys

ಹಿರಿಯ ಲೇಖಕ, ವಿಮರ್ಶಕ ಸುರೇಂದ್ರನಾಥ ಮಿಣಜಗಿ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಗ್ರಂಥದಲ್ಲಿ ಒಟ್ಟು ಎಂಟು ಬರಹಗಳಿವೆ. ಸಂಕಲನದ ಪ್ರಮುಖ ಆಶಯದ ಕುರಿತು ‘ಕೃತಿಯು ಒಳಗೊಳ್ಳುವ ಕೃತಿಕಾರನ ಸಂವೇದನೆ ಮತ್ತು ಆತನ ಸೃಜನಕ್ರಿಯೆ, ಇವುಗಳ ವಿಶ್ಲೇಷಣೆಗೆ ಗಮನಕೊಟ್ಟು ಅಲ್ಲಿಂದಲೇ ಕೃತಿಯ ಸಾಹಿತ್ಯಕ ಮೌಲ್ಯಗಳನ್ನು ಪರೀಕ್ಷಿಸುವುದು’ ಎಂದು ಹೇಳಿದ್ದಾರೆ. ಪೂರ್ವಪೀಠಿಕೆಯಾಗಿ ಮೊದಲ ಎರಡು ಲೇಖನಗಳಿವೆ. ಸೃಜನಕ್ರಿಯೆ ಹಾಗೂ ಅಭಿವ್ಯಕ್ತಿ ನಿಯಂತ್ರಣ, ಸೃಜನಕ್ರಿಯೆ: ಬ್ಲೇಕ್ ಕವಿಯ ‘ವ್ಯಾಘ್ರ’ ಹಾಗೂ ಬೇಂದ್ರೆಯವರ ‘ಛಾಯೆ’ ಕವಿತೆಗಳ ವಿಶ್ಲೇಷಣೆ. ಮೂರನೇ ಲೇಖನವು ‘ಭಾರತೀಯ ಹಾಗೂ ಪಾಶ್ಚಾತ್ಯ ರಸ ಸಂವೇದನೆ ಮತ್ತು ಕಾವ್ಯ ಸ್ವರೂಪ’ ಕುರಿತದ್ದಾಗಿದೆ. ನವೋದಯ ಸಾಹಿತ್ಯದ ಇತಿಮಿತಿಗಳು, ಹೋಮರ್, ಮಿಲ್ಟನ್, ಕುವೆಂಪು: ಒಂದು ತೌಲನಿಕ ಅಧ್ಯಯನ, ಸಮನ್ವಯ ಸಿಂಹಾಸನಾಧಿಕಾರಿ: ಕವಿ ವಿನಾಯಕ, ‘ಚಕೋರಿ’: ಪರಿಷ್ಕೃತ ಜಾನಪದ ಸಂವೇದನೆಯ ಸಂತೃಪ್ತ ಅಭಿವ್ಯಕ್ತಿ, ವಿ.ಸೀ. ಅವರ ‘ಇತಿಹಾಸ ಕಾವ್ಯಗಳು’ ಕುರಿತ ಲೇಖನಗಳನ್ನು ಕನ್ನಡ ಸಾಹಿತ್ಯದಲ್ಲಿ ಹಾಗೂ ವಿಮರ್ಶೆಯ ಓದಿನಲ್ಲಿ ಆಸಕ್ತರಾಗಿರುವವರ ಗಮನ ಸೆಳೆಯುವಂತಿವೆ. ವಿಭಿನ್ನ ಒಳನೋಟ ಹಾಗೂ ಅದನ್ನು ಪ್ರಸ್ತುತ ಕ್ರಮ ಪ್ರಿಯವಾಗುತ್ತದೆ.

About the Author

ಸುರೇಂದ್ರನಾಥ ಮಿಣಜಗಿ
(05 September 1926 - 01 October 2015)

ಬೆಳಗಾವಿ ಜಿಲ್ಲೆಯ ಗುಳೇದಗುಟ್ಟಿದಲ್ಲಿ ಜನಿಸಿದ ಸುರೇಂದ್ರನಾಥ ಅವರು ಗುಳೇದಗುಡ್ಡ, ಧಾರವಾಡ, ಸಾಂಗ್ಲಿಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಅವರು ನಂತರ ಧಾರವಾಡದಲ್ಲಿ ವೃತ್ತಿ ಜೀವನ ಆರಂಭಿಸಿದರು. ಆಮೇಲೆ ಗುಜರಾತಿನ ವಲ್ಲಭ ವಿದ್ಯಾನಗರದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಕನ್ನಡದ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರಾದ ಮಿಣಜಗಿಯವರು ವಿ.ಕೃ. ಗೋಕಾಕರ ಆಪ್ತಶಿಷ್ಯರಲ್ಲೊಬ್ಬರು. ‘ಸೃಜನಕ್ರಿಯೆ ಮತ್ತು ಸಂವೇದನೆ’, ಎಲಿಯಟ್: ಕವಿ ಹಾಗೂ ನಾಟಕಕಾರ, ಪ್ರತೀಯಮಾನ, ವಿನಾಯಕ ಕೃಷ್ಣ ಗೋಕಾಕ್, ಟಿ.ಎಸ್. ಎಲಿಯಟ್ ವಿಮರ್ಶೆಯ ವಿಚಾರಗಳು ಇವರ ಪ್ರಮುಖ ಕೃತಿಗಳು. ಎಲಿಯಟ್: ಕವಿ ಹಾಗೂ ...

READ MORE

Related Books