‘ಬೀಜದೊಳಗಣ ವೃಕ್ಷ’ ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪ ವರಕವಿ ಬೇಂದ್ರೆ ಅವರ ಕಾವ್ಯದ ವಿಮರ್ಶಾ ಲೇಖನಗಳ ಸಂಕಲನ. ಲೇಖಕಿ ಗೀತಾ ವಸಂತ ಈ ಕೃತಿಯನ್ನು ರಚಿಸಿದ್ದಾರೆ. ಗೀತಾ ಅವರದ್ದು ಕೇವಲ ಪಠ್ಯಕೇಂದ್ರಿತ ಚಿಂತನೆಯಲ್ಲ..ಅವರಿಗೆ ಸಂಸ್ಕೃತಿ ನೀಡಿದ ಗ್ರಹಿಕೆಯೂ ಕಾವ್ಯ ಸಂದರ್ಭದ ಭಾಗವೇ, ನಮ್ಮ ಸಂಸ್ಕೃತಿಯ ನೆಲೆಗಳು ಬಹುತ್ವದಿಂದ ಕೂಡಿದೆ ಎಂಬ ಅರಿವೂ ಅವರಿಗಿದೆ ಎನ್ನುತ್ತಾರೆ ಎಸ್. ಆರ್. ವಿಜಯಶಂಕರ.
ಬೀಜದೊಳಗಣ ವೃಕ್ಷ ಕೃತಿಗೆ ಬೆನ್ನುಡಿಯನ್ನು ಬರೆದಿರುವ ವಿಜಯ ಶಂಕರ, ಇದೊಂದು ಅಪರೂಪದ ಕಾವ್ಯಾನುಭೂತಿಯ ಬರಹವಾಗಿದೆ ಎನ್ನುತ್ತಾರೆ. ಗೀತಾ ಅವರ ಈ ಕಾವ್ಯ ತನ್ಮಯತೆ ಹಾಗೂ ವೈಯಕ್ತಿಕ ಗ್ರಹಿಕೆಯ ಭಾಗದಂತೆ ಸಾಗುವ ಕವನಗಳ ವಿವರಣೆ ಈ ಕೃತಿಯನ್ನು ಇತರ ಸಂಶೋಧನಾ ಕೃತಿಗಳಿಂದ ಭಿನ್ನವಾಗಿಸಿದೆ. ಇತರ ಸಂಶೋಧನಾ ಕೃತಿಗಳು ಆಕರಗಳಿಂದ ಕಟ್ಟಿದ ಆಕೃತಿಯಂತೆ ಗೋಚರಿಸುತ್ತವೆ. ಗೀತಾ ಅವರ ಈ ಕೃತಿಯ ಮೂಲದ್ರವ್ಯ ತನ್ಮಯತೆಯಿಂದ ತುಡಿಯುವ ಕಾವ್ಯಪ್ರೀತಿ. ಕಾವ್ಯದ ಈ ಒಳಗೊಳ್ಳುವಿಕೆ ಸ್ವಯಂ ಗ್ರಹಿಕೆಯ ನೆಲೆಯನ್ನು ಬೇಂದ್ರೆ ಕಾವ್ಯ ಪರಿಪ್ರೇಕ್ಷ್ಯದಲ್ಲಿ ನೀಡಿದೆ. ಪುನರ್ ವಿವರಣೆಗಳು.ಇಲ್ಲಿಯ ಬರವಣಿಗೆಗೆ ಸಹಜವಾದ ಹರಿವು ನೀಡಿವೆ.
ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿರುವ ಅವರು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ...
READ MORE