ಸಾಹಿತ್ಯ ಸಂವೇದನೆ

Author : ಈರಯ್ಯ ಹಂಪಾಪುರ

Pages 124

₹ 110.00




Year of Publication: 2020
Published by: ಸಾಹಿತ್ಯ ಸಂಭ್ರಮ ಪ್ರಕಾಶನ
Address:  #43, 10ನೇ ಅಡ್ಡರಸ್ತೆ, ಜ್ಞಾನ ಗಂಗಾನಗರ, ಜ್ಞಾನಭಾರತಿ ಅಂಚೆ, ಬೆಂಗಳೂರು-560056, 
Phone: +91 7676985533

Synopsys

ಲೇಖಕ ಈರಯ್ಯ ಹಂಪಾಪುರ ಅವರ ವಿಮರ್ಶಾ ಲೇಖನಗಳ ಸಂಗ್ರಹ ಕೃತಿ. ಕೃತಿಯಲ್ಲಿ 11 ವಿಮರ್ಶಾ ಲೇಖನಗಳಿವೆ. ಡಾ. ಕೋ.ವೆಂ.ರಾಮಕೃಷ್ಣೇಗೌಡ ಅವರು ಕೃತಿಗೆ ಮುನ್ನುಡಿ ಬರೆದು ‘ಈ ಕೃತಿಯಲ್ಲಿ  ದಲಿತ ಪ್ರಜ್ಞೆ, ಕನ್ನಡ ಪ್ರಜ್ಞೆ, ಮಹಿಳಾ ಸಂವೇದನೆ ಜಾಗೃತಾವಸ್ಥೆಯಲ್ಲಿವೆ. ಕಾವ್ಯ ಕಾದಂಬರಿಗಳ ಅವಲೋಕನ, ಸಮಕಾಲೀನ ಸಮಾಜದ ಆಶೋತ್ತರಗಳಿಗೆ ಅಂಬೇಡ್ಕರರ ಕೊಡುಗೆ, ಜಾಗತೀಕರಣವು ಬಹುಸಂಸ್ಕೃತಿಗಳ ಮೇಲೆ ನಡೆಸಿರುವ ದಾಳಿ, ಅಸಂಘಟಿತ ಮಹಿಳೆಯರ ಸ್ಥಿತಿಗತಿ, ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆ, ಕನ್ನಡ ಅಧ್ಯಾಪಕರ ಬೋಧನಾ ಸವಾಲುಗಳನ್ನು ವಿಶ್ಲೇಷಣೆಗೆ ಒಳಗು ಮಾಡುವಾಗ ಸಂಶೋಧನಾ ಮಾನದಂಡ, ವಿಮರ್ಶಾ ದೃಷ್ಟಿಕೋನವನ್ನು ಇಟ್ಟುಕೊಂಡಿರುವುದು ಧನಾತ್ಮಕ ಅಂಶವಾಗಿದೆ. ದಲಿತ ಪ್ರಜ್ಞೆಯನ್ನು ಮೂಲ ಧಾತುವಾಗಿಸಿಕೊಂಡಿರುವ ಕೃತಿ ಇದು’ ಎಂದು ಪ್ರಶಂಸಿಸಿದ್ದಾರೆ.  

ಡಾ. ಹನುಮಂತರಾಯಪ್ಪ ಎಸ್.ಬಿ. ಅವರು ಬೆನ್ನುಡಿ ಬರೆದು“ಮರೆತ ದಲಿತ ಸಾಹಿತ್ಯವನ್ನು(ಹರಿಜನಾಭ್ಯುದಯ)  ಪುನರ್ ಶೋಧಿಸುವ, ತರಾಸು ಕಾದಂಬರಿಗಳಲ್ಲಿಯ ಪುರುಷ ಪ್ರಧಾನ ವ್ಯವಸ್ಥೇಯಲ್ಲಿಯ ಶೋಷಣೆಗಳನ್ನು ತೆರೆದಿಡುವ ಪ್ರಯತ್ನ, ಜಮೀನುದಾರಿ ಪದ್ಧತಿಯಿಂದ ದಲಿತರಿಗೆ ಆಗುವ (ಚೋಮನ ದುಡಿ) ಶೋಷಣೆಯನ್ನು, ಕಾರ್ಲ್ ಮಾಕ್ಸ್ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ದುಡಿಯುವ ವರ್ಗಕ್ಕೆ ಹಾಗೂ ಮಹಿಳಾ ವರ್ಗಕ್ಕೆ ಯಾವ ರೀತಿಯ ಚಿಕಿತ್ಸಕ ರೂಪದಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದರ ಚರ್ಚೆ ಇದೆ. ಮಾಧ್ಯಮಗಳ ಹೊಣೆಗಾರಿಕೆಯ ಅನಿವಾಐðತೆಯನ್ನು ವಿಮರ್ಶಿಸಿದೆ. ಹೀಗೆ ಎಲ್ಲ ಜ್ಞಾನ ಶಾಖೆಗಳನ್ನು ಒಗ್ಗೂಡಿಸಿ ವಿಮರ್ಶೆಗೆ ಒಳಪಡಿಸಿದೆ’ ಎಂದು ಪ್ರಶಂಸಿಸಿದ್ದಾರೆ. 

ಲೇಖಕ ಈರಯ್ಯ ಹಂಪಾಪುರ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ‘ಇಲ್ಲಿಯ ವಿಚಾರಗಳು ಸಾಂದರ್ಭಿಕವಾಗಿ ಹುಟ್ಟಿಕೊಂಡಿವೆ. ಸಾಹಿತ್ಯವನ್ನು ಓದುವ  ಮೂಲಕ ವಿವಿಧ ವಿಚಾರಗಳ ಪ್ರಭಾವಕ್ಕೆ ಒಳಗಾಗಿ ಸ್ವಲ್ಪಮಟ್ಟಿಗೆಡ ನಿಲುಕಿದ ವಿಚಾರಗಳನ್ನು ಲೇಖನ ರೂಪದಲ್ಲಿ ಒಗ್ಗೂಡಿಸಿ ಪುಸ್ತಕ ಹೊರತರಲು ಸಾದ್ಯವಾಗಿದೆ’ ಎಂದು ಹೇಳಿಕೊಂಡಿದ್ದಾರೆ.  

 

 

 

 

About the Author

ಈರಯ್ಯ ಹಂಪಾಪುರ

ಲೇಖಕ ಈರಯ್ಯ ಹಂಪಾಪುರ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಗಂಗೂರು ಅಂಚೆಯ ಹಂಪಾಪುರ ಗ್ರಾಮದವರು. ಎಂ.ಎ, ಬಿ.ಇಡಿ ಹಾಗೂ ಪಿಎಚ್ ಡಿ ಪದವೀಧರರು. ‘ತರಾಸು ಅವರ ಸಾಮಾಜಿಕ ಕಾದಂಬರಿಗಳಲ್ಲಿ ಸ್ತ್ರೀಯರ ಚಿತ್ರಣ: ಒಂದು ಅಧ್ಯಯನ’ ವಿಷಯದಲ್ಲಿ ಮಹಾ ಪ್ರಬಂಧ ಮಂಡನೆ. ಬೆಂಗಳೂರಿನ ಲಾಲ್ ಬಾಗ್ ಬಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ಸಾಹಿತ್ಯ ಸಂವೇದನೆ (ವಿಮರ್ಶಾ ಲೇಖನಗಳು)  ಸ್ತ್ರೀ ಸಂವೇದನಾತ್ಮಕ ನೆಲೆಗಳು (ತರಾಸು ಸಾಮಾಜಿಕ ಕಾದಂಬರಿಗಳು) ಸಾಹಿತ್ಯದ ಓದು (ಸಂಪಾದನೆ) ವಿವಿಧೆಡೆ ಉಪನ್ಯಾಸಗಳನ್ನು ಮಂಡಿಸಿದ್ದು, ಸಂಶೋಧನಾತ್ಮಕ ಲೇಖನಗಳು ...

READ MORE

Related Books