ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ.ಗೋಕಾಕ (ವಿನಾಯಕ) ಅವರ ಕೃತಿ-ನವ್ಯತೆ. ನವ್ಯ ಕಾವ್ಯ, ಕಾವ್ಯದ ಗೊತ್ತು-ಗುರಿಗಳು ಹೀಗೆ ಕೃತಿಗಳನ್ನು ಬರೆದ ಕವಿ ಗೋಕಾಕರು, ಕಾವ್ಯ ಬರೆಹದಲ್ಲಿ ನವ್ಯತೆ ಕುರಿತು ಬರೆದಿದ್ದು, ಕವನಗಳನ್ನು ಹೊಸ ಸಾಧ್ಯತೆಗಳ ಹೊಳವುಗಳನ್ನು ನೀಡಿದೆ.
ಸಾಹಿತ್ಯ ಹಾಗೂ ನವ್ಯತೆ, ನವ್ಯ ಕಾವ್ಯದ ರೀತಿ, ಕಾವ್ಯ ಹಾಗೂ ನವ್ಯ ಕಾವ್ಯದ ರೀತಿ, ನವ್ಯ ಕಾವ್ಯ ಹಾಗೂ ಯುಗದ ಆವರಣ, ಮೂಡಣ-ಪಡುವಣದ ನವ್ಯತೆಯ ಆವರಣಗಳು, ನವ್ಯತೆಯ ಪರೋಗಾಮಿತ್ವ, ನವ್ಯತೆ ಹಾಘೂ ತತ್ವ, ನವ್ಯತೆ ಹಾಗೂ ಭಾಷೆ, ನವ್ಯತೆ, ಛಂದಸ್ಸು, ಶೈಲಿ, ಭಾರತೀಯ ಪುನರುಜ್ಜೀವನ ಹಾಗೂ ನವ್ಯತೆ, ನವೋದಯ ಕಾವ್ಯ ಹಾಗೂ ನವ್ಯ ಕಾವ್ಯ, ನವ್ಯತೆ ಹಾಗೂ ಸಮಕಾಲೀನ ಕನ್ನಡ ಸಾಹಿತ್ಯ, ‘ಸಮನ್ವಯ’ದ ಘೋಷಣೆ, ನವ್ಯತೆ ಹಾಗೂ ಸಮನ್ವಯ, ವಿಮರ್ಶೆಯಲ್ಲಿ ಸಮನ್ವಯ ದೃಷ್ಟಿ ಹೀಗೆ ವಿದ್ವತ್ ಪೂರ್ಣವಾದ ಒಟ್ಟು 13 ಬರಹಗಳನ್ನು ಈ ಸಂಕಲನ ಒಳಗೊಂಡಿದೆ.
ಮೈಸೂರಿನ ಸುರುಚಿ ಪ್ರಕಾಶನವು 1975 ರಲ್ಲಿ ಮೊದಲು ಪ್ರಕಾಶಿಸಿತ್ತು. 156 ಪುಟಗಳಿದ್ದವು.
‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...
READ MORE