ಗಾಂಧಿಯ ಹಿಂದ್ ಸ್ವರಾಜ್

Author : ಮುಜಾಫರ್ ಅಸ್ಸಾದಿ

Pages 128

₹ 100.00




Published by: ವಿಸ್ಮಯ ಪ್ರಕಾಶನ
Address: ಮೈಸೂರು

Synopsys

‘ಗಾಂಧಿಯ ಹಿಂದೂ ಸ್ವರಾಜ್’ ಕೃತಿಯು ಮುಜಾಫರ್ ಅಸ್ಸಾದಿ ಅವರ ಸಂಪಾದಿತ ವಿಮರ್ಶಾ ಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನೂರು ವರ್ಷದ ಹಿಂದೆ ಪ್ರಕಟವಾದ ಮಹಾತ್ಮ ಗಾಂಧಿಯವರ ಪುಸ್ತಕ `ಹಿಂದ್ ಸ್ವರಾಜ್‘. ಇದು ಕಳೆದ ಒಂದು ಶತಮಾನದಲ್ಲಿ ಬೀರಿದ ಪ್ರಭಾವ ಅಪಾರ. ಸಂಪಾದಕ ಹಾಗೂ ಓದುಗನ ನಡುವಿನ ಸಂವಾದದಂತಿರುವ ಈ ಪುಟ್ಟ ಪುಸ್ತಕ ಗಾಂಧೀಜಿಯವರ ಪ್ರಾತಿನಿಧಿಕ ಚಿಂತನೆಯಂತಿದೆ. `ಹಿಂದ್ ಸ್ವರಾಜ್‘ ಕುರಿತಂತೆ ಬರುತ್ತಿರುವ ವಿಮರ್ಶೆಗಳಾಗಲೀ, ಲೇಖನಗಳಾಗಲೀ ಅದರ ಪ್ರಸ್ತುತತೆಯನ್ನು ತೋರುತ್ತದೆ. ನಮ್ಮ ಕನ್ನಡದ ಚಿಂತಕರಾದ ಜೆ.ಎಸ್. ಸದಾನಂದ, ಕೆ. ರಾಘವೇಂದ್ರರಾವ್, ಎಚ್.ಪಟ್ಟಾಭಿರಾಮ ಸೋಮಯಾಜಿ, ರಾಜರಾಮ ತೋಳ್ಪಾಡಿ `ಹಿಂದ್ ಸ್ವರಾಜ್‘ ಕುರಿತಂತೆ ಬರೆದಿದ್ದಾರೆ. ಗಾಂಧೀಜಿಯವರ ವಿಚಾರಗಳನ್ನು ಇಂದಿನ ಸಂದರ್ಭದಲ್ಲಿಟ್ಟು, ಅವು ವರ್ತಮಾನಕ್ಕೆ ಹೊಂದುತ್ತದೆಯೇ ಎಂಬುದನ್ನು ಇಲ್ಲಿನ ಅನೇಕ ಲೇಖನಗಳು ಚಿಂತಿಸಿವೆ. ಏಕೆಂದರೆ, ಗಾಂಧೀಜಿ ನೂರು ವರ್ಷದ ಹಿಂದೆ ವಸಾಹತುಶಾಹಿಗೆ ವಿರುದ್ಧವಾಗಿ ಅದನ್ನು ಬರೆದಿದ್ದರು. ಅದೇನೇ ಇದ್ದರೂ, ಗಾಂಧಿಯವರ ವಿಚಾರಗಳನ್ನು ಇಂದಿನ ಸಂದರ್ಭಕ್ಕೆ ಮರುಪರಿಶೀಲಿಸಿದ್ದು `ಹಿಂದ್ ಸ್ವರಾಜ್‘ನ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯುತ್ತದೆ.

About the Author

ಮುಜಾಫರ್ ಅಸ್ಸಾದಿ

ಡಾ. ಮುಜಾಫರ್ ಅಸ್ಸಾದಿ ಅವರು ಮಂಗಳೂರು ವಿ.ವಿ.ಯಿಂದ ಸ್ನಾತಕೋತ್ತರ ಪದವಿ, ನವದೆಹಲಿಯ ಜೆಎನ್ ಯು ನಿಂದ ಎಂ.ಫಿಲ್ ಹಾಗೂ ಪಿಎಚ್ ಡಿ ನಂತರ ಶಿಕಾಗೋ ವಿ.ವಿ.ಯಿಂದ ರಾಕ್ ಫೆಲ್ಲರ್ ಫೆಲೋ, ಪೋಸ್ಟ್ ಡಾಕ್ಟೊರಲ್ ಪದವೀಧರರು. ಈವರೆಗೆ 11 ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ಹೈಕೋರ್ಟ್ ಸಮಿತಿ ಅಧ್ಯಕ್ಷರಾಗಿ, ವರದಿ ನೀಡಿದ್ದಾರೆ. ಸದ್ಯ, ಮೈಸೂರು ವಿ.ವಿ.ಯ ರಾಜ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕರು. ಕೃತಿಗಳು: ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ...

READ MORE

Related Books