ಭಾಸ ಕವಿ ಅತ್ಯಂತ ಪ್ರಾಚೀನ ಕವಿ. ಸಂಸ್ಕೃತದಲ್ಲಿ ಬರೆದ ಈತನ ನಾಟಕಗಳಿಗೆ ಕಾವ್ಯದ ಗುಣಗಳಿವೆ. ಕವಿಯ ವಿಚಾರ ಹಾಗೂ ಆತನ ಕಾವ್ಯ ವಿಮರ್ಶೆಗೆ ಸಂಬಂಧಿಸಿದಂತೆ ಚಿಂತಕ ಎ.ಆರ್. ಕೃಷ್ಣಶಾಸ್ತ್ರಿ ಅವರು ಬರೆದ ಕೃತಿ-ಭಾಸ ಕವಿ. ಈ ಕವಿಯ ವಿವರವಾದ ಪ್ರಸ್ತಾವನೆ, ಸ್ವಪ್ನ ವಾಸವದತ್ತ, ಪ್ರತಿಮಾ ನಾಟಕ, ಪಂಚ ರಾತ್ರ, ಏಕಾಂಕ ನಾಟಕಗಳು, ಇತರೆ ನಾಟಕಗಳು-ಈ ಅಧ್ಯಾಯಗಳ ಮೂಲಕ ಭಾಸ ಕವಿಯ ಸಮಗ್ರ ಸಾಹಿತ್ಯಕ ವಿಚಾರಗಳನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913) ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...
READ MORE