ಸಾಹಿತ್ಯರತ್ನ ಸಂಪುಟ

Author : ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

Pages 350

₹ 150.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕನ್ನಡ ಸಾಹಿತ್ಯದಲ್ಲಿ ಅಮೋಘವಾಗಿ ಕೆಲಸ ಮಾಡಿದ ಮೂವತ್ತೆಂಟು ಹಿರಿಯ ಸಾಹಿತಿಗಳ ವ್ಯಕ್ತಿಚಿತ್ರಗಳನ್ನು ಈ ಕೃತಿಯು ಒಳಗೊಂಡಿದೆ. ಹಿರಿಯ ವಿಧ್ವಾಂಸ ಮತ್ತು ಕವಿಗಳಾದ ’ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ’ರು ಕನ್ನಡದ ಓದುಗರಿಗೆ ಸಾಹಿತ್ಯ ಸೌಭಾಗ್ಯವೊಂದನ್ನು ಈ ಕೃತಿಯ ಮೂಲಕ ಒದಗಿಸಿದ್ದಾರೆ. ಡಿವಿಜಿ, ಬಿಎಂಶ್ರೀ, ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ, ಗೋಕಾಕ್, ಅಡಿಗ, ಶಿವರುದ್ರಪ್ಪ, ಅನಂತಮೂರ್ತಿ, ಭೈರಪ್ಪ ಹೀಗೆ ಪ್ರಮುಖ ಮಹನೀಯ ವ್ಯಕ್ತಿಗಳ ಚಿತ್ರಣ ಈ ಕೃತಿಯಲ್ಲಿದೆ. ಈ ಲೇಖಕರ ಮೌಲಿಕ ಸಾಹಿತ್ಯ ಸಾಧನೆ ಅವರ ಜೀವನ ಶೈಲಿ, ಇವರ ಬದುಕಿನಲ್ಲಿ ನಡೆದ ಹಲವು ಸ್ವಾರಸ್ಯಕರ ವಿಷಯಗಳ ವಿವರಣೆಯನ್ನು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
(29 October 1936 - 06 March 2021)

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಕನ್ನಡದ ಜನಪ್ರಿಯ ಕವಿಗಳಲ್ಲಿ ಒಬ್ಬರು. ಮೂಲತಃ ಶಿವಮೊಗ್ಗದವರಾದ ಅವರು ಸದ್ಯ ಬೆಂಗಳೂರು ನಗರದ ನಿವಾಸಿ. ಅವರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಅವರ ಪೂರ್ಣ ಹೆಸರು ನೈಲಾಡಿ ಶಿವರಾಮ ಲಕ್ಷ್ಮೀನಾರಾಯಣ ಭಟ್ಟ. ಅವರು ಕವಿ ಮಾತ್ರವಲ್ಲದೆ ವಿಮರ್ಶಕ ಹಾಗೂ ವಾಗ್ಮಿ. ಅವರ ಭಾವಗೀತೆಗಳು ಕ್ಯಾಸೆಟ್‌ಗಳ ಮೂಲಕಜನಪ್ರಿಯಗೊಂಡಿವೆ. ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ದೀಪಿಕಾ ಮತ್ತು ಬಾರೋ ವಸಂತ (ಕವನ ಸಂಗ್ರಹಗಳು), ಹೊರಳು ದಾರಿಯಲ್ಲಿ ಕಾವ್ಯ (ವಿಮರ್ಶೆ), ಜಗನ್ನಾಥ ವಿಜಯ, ಮುದ್ರಾ ಮಂಜೂಷ, ಕರ್ಣ, ಕುಂತಿ, ಕನ್ನಡ ...

READ MORE

Related Books