ಲೇಖಕ ಹಾಗೂ ಸಾಹಿತಿ ರಾಜಶೇಖರ ಮಠಪತಿ (ರಾಗಂ) ಅವರ ಕಾದಂಬರಿ- ದಂಡಿ. ಈ ಕಾದಂಬರಿ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯಗಳು, ಬಂದ ವಿಮರ್ಶೆಗಳು ಹಾಗೂ ಅವುಗಳ ಪರಾಮರ್ಶೆ -ಈ ಎಲ್ಲವನ್ನು ಸಂಪಾದಿಸಿದ ಕೃತಿ-ದಂಡಿ: ಮಾತು, ವಿಮರ್ಶೆ, ಪರಾಮರ್ಶೆ. ಡಾ. ಎಸ್. ರಮೇಶ ಕತ್ತಿ ಹಾಗೂ ಡಾ. ವಿಠ್ಠಲ ದಳವಾಯಿ ಅವರು ಸಂಪಾದಿಸಿದ್ದಾರೆ.
ಲೇಖಕ ರಾಗಂ ಅವರು ದಂಡಿ ಕೃತಿಯು, ಲೇಖಕರೇ ಹೇಳುವಂತೆ ‘ದಂಡಿಯು ಕೇವಲ ತುಂಡು ನೆಲದ ಕಥನವಲ್ಲ. ಅದು ಜಗದ ಕಡಲ ಕುದಿ. ದಂಡಿ-ಸತ್ತವರ ಚರಿತ್ರೆಯೂ ಅಲ್ಲ; ವರ್ತಮಾನವೂ ಅಲ್ಲ. ಮುಂದೊಮ್ಮೆ ಅದು ಭವಿಷ್ಯವಾಗುವುದಾದರೆ ಅದು ಗುಣದ ಶಕ್ತಿ. ಅದು ನಾವು ನಿತ್ಯ ತಿನ್ನುವ ಉಪ್ಪಿನ ಆತ್ಮಚರಿತ್ರೆ. ಉಪ್ಪಿ ಎಂದರೆ, ಗುಣ ಮತ್ತು ಋಣದ ಹಾಡು. ದಂಡಿ-ಇಡೀ ಜಗತ್ತಿನಲ್ಲಿ ಚಾಚಿಕೊಂಡ ಮನುಷ್ಯನೆಂಬೋ ಮನುಷ್ಯ ಧರ್ಮದ ಅನಾವರಣವಷ್ಟೇ.' ಎಂದಿದ್ದಾರೆ. ಇಂತಹ ಐತಿಹಾಸಿಕ ಘಟನೆಯೊಂದರೆ ಹಾಗೂ ವ್ಯಕ್ತಿಕೇಂದ್ರಿತ (ಮಹಾತ್ಮ ಗಾಂಧಿ) ವ್ಯಕ್ತಿತ್ವವೊಂದನ್ನು ಬಿಂಬಿಸುವ ಕಾದಂಬರಿ ಇದಾಗಿದ್ದು, ಈ ಕುರಿತು ಬಂದ ವಿಮರ್ಶೆ-ಪರಾಮರ್ಶೆಗಳ ಸಂಪಾದನೆಯು ಈ ಕೃತಿಯ ವೈಶಿಷ್ಟ್ಯ. . . .
ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ: ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ. ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...
READ MORE