ವಿಮರ್ಶೆಯ ವಿಮರ್ಶೆ (2009)ಯು ತೇಜಸ್ವಿ ಅವರ ಏಕೈಕ ವಿಮರ್ಶಾ ಕೃತಿ ಇದು. ತೇಜಸ್ವಿ ಅವರು ಬರೆದ ವಿಮರ್ಶೆ, ಸಂವಾದ, ಮುನ್ನುಡಿ, ಸಂದರ್ಶನ, ಅನುವಾದ, ಪತ್ರಗಳನ್ನು ಒಳಗೊಂಡ ೨೬ ಲೇಖನಗಳು ಈ ಕೃತಿಯಲ್ಲಿವೆ. ಆದಿಕವಿ ಪಂಪನ ಕಾವ್ಯದ ಮೌಲ್ಯ ವಿವೇಚನೆ, ತೇಜಸ್ವಿ ಅವರ ಸಾಹಿತ್ಯ ವಿಮರ್ಶೆಯ ಶಕ್ತಿ ಸಾಮರ್ಥ್ಯವನ್ನು ನಮ್ಮ ಮುಂದಿಡುತ್ತದೆ. ಕುವೆಂಪು ಅವರನ್ನು ಕುರಿತು ಇರುವ ಅನೇಕ ಗೊಂದಲಗಳಿಗೆ ಅಪಕಲ್ಪನೆಗಳಿಗೆ ’ಪರಂಪರೆ ಮತ್ತು ಕುವೆಂಪು' ಲೇಖನ ಉತ್ತರ ನೀಡುತ್ತದೆ. ಹಾಗೆಯೇ ಜಡಗೊಂಡ ಸಾಂಸ್ಕೃತಿಕ ಪರಿಸರ ಮುನ್ನಡೆಯಬೇಕಾದ ಮಾರ್ನುಡಿಯಂತಿದೆ ’ಹೊಸದಿಗಂತದೆಡೆಗೆ' ಲೇಖನ. ಈ ಲೇಖನ ಅಥವಾ ಮುನ್ನುಡಿ ಕನ್ನಡ ಸಾಹಿತ್ಯದ ನಡಿಗೆಯನ್ನೆ ಬದಲಿಸಿದ ಬರಹ ಅಥವಾ ಆಲೋಚನ ಕ್ರಮ ಎಂದರೆ ಅತಿಶಯೋಕ್ತಿಯಲ್ಲ. 'ಕರ್ನಾಟಕ ಸಂಸ್ಕೃತಿ ವಿಶ್ಲೇಷಣೆ' ಕನ್ನಡ ಸಾಂಸ್ಕೃತಿಕ ಚಿಂತನೆಗೆ ದಾರಿದೀಪ. ಹೀಗೆ ಇಲ್ಲಿನ ಎಲ್ಲ ಲೇಖನಗಳು ಕನ್ನಡಭಾಷೆ, ಸಂಸ್ಕೃತಿ ಕಾವ್ಯ ಮೀಮಾಂಸೆ, ವಿಮರ್ಶೆ, ಸಹೃದಯ-ಕವಿಯನ್ನು ಕುರಿತಾಗಿದೆ. ಟಿ.ಎಸ್. ಎಲಿಯಟ್‌ನ 'ಥೀ ವಾಯ್ಸ್ ಆಫ್ ಪೊಯಿಟಿಯ ಅಪ್ರಕಟಿತ ಅನುವಾದ ಲೇಖನವೂ ಇಲ್ಲಿ ಸೇರಿದೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MORE